PSI Singh’s transfer: Staff members are shocked

ಸಚೀನ ಆರ್ ಜಾಧವ
ಸಾವಳಗಿ: ಜಮಖಂಡಿ ತಾಲೂಕಿನ ಸಾವಳಗಿ ಪೊಲೀಸ್ ಠಾಣೆಯಲ್ಲಿ ಸುಮಾರು 6 ತಿಂಗಳ ಕಾಲ ಪೊಲೀಸ್ ಸಬ್ ಇನ್ಸ್ಪೆಕ್ಟರ ಆಗಿ ಕಾರ್ಯನಿರ್ವಹಿಸಿ ಮತ್ತೊಂದು ಠಾಣೆಗೆ ವರ್ಗಾವಣೆಗೊಂಡ ಪಿಎಸ್ಐ ಶಿವಾನಂದ ಸಿಂಗನ್ನವರ ಅವರಿಗೆ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸೇರಿ, ಗ್ರಾಮದ ಯುವಕರು, ಹಿರಿಯರು ಸೇರಿ ಮಂಗಳವಾರ ಸಾಯಂಕಾಲ ಬಿಳ್ಕೋಡುಗೆ ನೀಡಿದರು.
ನಂತರ ಮಾತನಾಡಿದ ಪಿಎಸ್ಐ ಶಿವಾನಂದ ಸಿಂಗನ್ನವರ ಅವರು ನನಗೆ ಈ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಗಳು ಪ್ರೀತಿಯಿಂದ, ಅಣ್ಣ ತಮ್ಮನಂತೆ ನೋಡಿಕೊಂಡಿದ್ದಿರಿ ಹಾಗೂ ನನಗೆ ಸಹಕರಿಸಿದ ಗ್ರಾಮದ ಹಿರಿಯರಿಗೂ ಯುವಕರಿಗೂ ಸೇರಿದಂತೆ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು.
ಇದೇ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿಗಳು, ಗ್ರಾಮದ ಹಿರಿಯರು, ಯುವಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
The post ಪಿಎಸ್ಐ ಸಿಂಗನ್ನವರ ವರ್ಗಾವಣೆ:ಸಿಬ್ಬಂದಿಗಳ ಬಿಳ್ಕೋಡುಗೆ appeared first on Kalyanasiri.
