ತಿಪಟೂರು: ಸದುದ್ದೇಶ ಹೊಂದಿದ ಸಹಕಾರಿ ಕ್ಷೇತ್ರದಿಂದ ಮಾತ್ರ ಅರ್ಥಿಕಾಭಿವೃದ್ಧಿ ಸಾಧ್ಯ ಎಂದು ಉದಯರವಿ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೆ.ಎಂ. ರಾಜಣ್ಣ ಹೇಳಿದರು. ನಗರದ ಒಕ್ಕಲಿಗರ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಘದ 25 ವರ್ಷದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
25 ವರ್ಷಗಳ ಹಿಂದ ಪ್ರಾರಂಭವಾದ ಉದಯರವಿ ಸೌಹಾರ್ದ ಪತ್ತಿನ ಸಹಕಾರಿ ಸಂಘ ಸ್ಥಾಯುತ್ತ ಸೌಹಾರ್ದ ಕಾನೂನಿನ ಅಡಿ ಬಡ ಮಧ್ಯಮ ವರ್ಗದವರಿಗೆ ಸಕಾಲದಲ್ಲಿ ಸಾಲ ಸೌಲಭ್ಯ ನೀಡುವ ಮೂಲಕ ಅವರ ಆರ್ಥಿಕಾಭಿವೃದ್ಧಿಗೆ ಶ್ರಮಿಸುತ್ತಿದೆ. ಸಂಘ 6108 ಸದಸ್ಯರನ್ನು ಹೊಂದಿದ್ದು, 25 ವರ್ಷಗಳಿಂದ ನಿರಂತರವಾಗಿ ಪ್ರಗತಿ ಸಾಧಿಸಿಕೊಂಡು ಬರುತ್ತಿದೆ. 2024 ಹಾಗೂ 2025ನೇ ವರ್ಷದ ಅಂತ್ಯಕ್ಕೆ 1562 ಕೋಟಿ ವಹಿವಾಟು ನಡೆಸಿದ್ದು, 447 ಲಕ್ಷ ನಿವ್ವಳ ಲಾಭ ಗಳಿಸಿದೆ. ಸಾಲ ವಸೂಲಾತಿಯಲ್ಲಿ ಶೇ.93 ಪ್ರಗತಿ ಸಾಧಿಸಿದೆ. ಪ್ರಗತಿಯ ಸಂಕೇತವಾಗಿ ಈ ವರ್ಷ ಶೇರುದಾರರಿಗೆ ಶೇ.20 ಲಾಭಾಂಶ (ಡಿವಿಡೆಂಡ್) ನೀಡಿದ್ದು, ನಮ್ಮ ಸಹಕಾರಿ ಸಂಘ ರಾಜ್ಯಮಟ್ಟದಲ್ಲಿ 13 ಮತ್ತು ಜಿಲ್ಲಾ ಮಟ್ಟದಲ್ಲಿ 2ನೇ ಅತ್ಯುತ್ತಮ ಸಹಕಾರಿ ಸಂಘದ ಕೀರ್ತಿಗೆ ಭಾಜನವಾಗಿದೆ ಎಂದು ತಿಳಿಸಿದರು.
ಶೇರುದಾರರು ಹೆಚ್ಚಿನ ಆರ್ಥಿಕ ಚಟುವಟಿಕೆ ನಡೆಸಿದಾಗ ಮಾತ್ರ ಸಂಘ ಅಥವಾ ಸಂಸ್ಥೆ ಪ್ರಗತಿ ಹೊಂದಲು ಸಾಧ್ಯ ನಮ್ಮ ಸಂಘದ 610 ಸದಸ್ಯರು ಇಲ್ಲಿವರೆಗೂ ಯಾವುದೇ ಅರ್ಥಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳದ ಕಾರಣ ಅಂತಹವರ ಸದಸ್ಯತ್ವವನ್ನು ಅನರ್ಹಗೊಳಿಸಲಾಗುವುದು ಎಂದರು. ಸಂಸ್ಥಾಪಕ ಅಧ್ಯಕ್ಷ ಎಂ.ಎಸ್ .ಸೋಮಶೇಖರ್ ಮಾತನಾಡಿ, ಸಂಘದ ಅರ್ಥಿಕ ಪ್ರಗತಿಯನ್ನು ಸದಸ್ಯರ ಮನೆ ಬಾಗಿಲಿಗೆ ತಲುಪಿಸಲಾಗಿದೆ ಎಂದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ,ಅಧಿಕಾರಿ, 2024 ಹಾಗೂ 2025ನೇ ಸಾಲಿನ ಆಡಳಿತ ವರದಿ, ಜಮಾ-ಖರ್ಚು, ಆಸ್ತಿ-ಜವಾಬ್ದಾರಿ ಮತ್ತು ಲಾಭ-ನಷ್ಟ ಶ ಬೈಗಳ ಮಾಹಿತಿಯನ್ನು ಸಭೆಯಲ್ಲಿ ಮಂಡಿಸಿ ಶೇರುದಾರರ ಒಪ್ಪಿಗೆ/ಅನುಮೋದನೆ ಪಡೆದುಕೊಂಡರು.
ನಿಧನರಾಗಿರುವ ಸಂಘದ 53 ಸದಸ್ಯರಿಗೆ ಗೌರವ ಶ್ರದ್ಧಾಂಜಲಿ ಅರ್ಪಿಸಲಾಯಿತು. 75 ವರ್ಷ ಮೇಲ್ಪಟ್ಟ 100ಕ್ಕೂ ಹೆಚ್ಚು ಹಿರಿಯ ಸದಸ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು. ನಾಗಲಾಂಬಿಕಾ ಇತರರು ಇದ್ದರು.
