‘ನೇಸರ’ ನೂತನ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ

ಭಾಸ್ಕರ ಪತ್ರಿಕೆ
0

ತಿಪಟೂರು:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಿಪಟೂರು ತಾಲೂಕು ಕಸಬಾ ವಲಯದ ಗಾಂಧಿನಗರ ಕಾರ್ಯಕ್ಷೇತ್ರದಲ್ಲಿ  ‘ನೇಸರ ‘ಎಂಬ ಹೆಸರಿನ ನೂತನ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆ ಮಾಡಲಾಯಿತು.

ತಿಪಟೂರು ನಗರ ಸಭೆ ಸದಸ್ಯರಾದ ಲತಾ ಲೋಕೇಶ್ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಅವರು,  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಅನೇಕ ಮಹಿಳೆಯರು ಆರ್ಥಿಕ ಶಿಸ್ತಿನೊಂದಿಗೆ ಸ್ವಉದ್ಯೋಗ ನಡೆಸಿಕೊಂಡು ಕುಟುಂಬ ನಡೆಸಿಕೊಂಡು ಹೋಗುತ್ತಿದ್ದಾರೆ, ಜ್ಞಾನ ವಿಕಾಸ ಕೇಂದ್ರದ ಮೂಲಕ ಇನ್ನು ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಶುಭ ನುಡಿದರು.

ಉದಯ್ ಕೆ. ಕ್ಷೇತ್ರ ಯೋಜನಾಧಿಕಾರಿಯವರು ಕೇಂದ್ರದ ದಾಖಲಾತಿಯನ್ನು ಹಸ್ತಾಂತರ ಮಾಡಿ ಜ್ಞಾನ ವಿಕಾಸ ಕಾರ್ಯಕ್ರಮವು ಮಹಿಳಾ ಸಬಲೀಕರಣದಲ್ಲಿ  ಪೂರಕವಾಗಿ ಸರ್ಕಾರಿ ಸೌಲಭ್ಯ, ಕಾನೂನು, ಶಿಕ್ಷಣ, ಅರೋಗ್ಯ ಅರಿವು, ಪೌಷ್ಟಿಕ ಆಹಾರ, ಸ್ವಉದ್ಯೋಗ ಪ್ರೇರಣಾ ಶಿಬಿರ ಅಧ್ಯಯನ ಪ್ರವಾಸ, ಜ್ವಲಂತ ಕಾರ್ಯಕ್ರಮದ ಕುರಿತು ತಾಲೂಕಿನಲ್ಲಿ ಪ್ರತಿ ತಿಂಗಳು ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಅರಿವು ಮೂಡಿಸುತ್ತಿದ್ದು, ಮಾತೃಶ್ರೀ ರವರ ಅಧ್ಯಕ್ಷತೆಯಲ್ಲಿ ಜ್ಞಾನ ವಿಕಾಸ, ವಾತ್ಸಲ್ಯ ಕಾರ್ಯಕ್ರಮ ರಾಜ್ಯದಾದ್ಯಂತ ಅತ್ಯುತ್ತಮವಾಗಿ ನಡೆಯುತ್ತಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಜನಜಾಗೃತಿ ಸದಸ್ಯ ತರಕಾರಿ ಗಂಗಣ್ಣ ಮತ್ತು ಮಹಾದೇವಮ್ಮ ರವರು ಮನೆಯ ಸ್ವಚ್ಛತೆ, ಅರೋಗ್ಯ ದ ಅರಿವು, ಪರಿಸರ ಸಂರಕ್ಷಣೆ, ಶಿಸ್ತು ಬದ್ದವಾಗಿ ಸ್ವ ಸಹಾಯ ಸಂಘ ಹೇಗೆ ಮಾದರಿಯಾಗಿ ನಡೆಸಬೇಕು,  ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಕಾಮಗಾರಿ, ಶುದ್ಧನೀರು, ಮಾಶಾಸನ, ವಾತ್ಸಲ್ಯ ಮನೆ ಸುಜ್ಞಾನನಿಧಿ ಪೂಜ್ಯರು ಅನೇಕ ಕಾರ್ಯಕ್ರಮ ನಡೆಸುತ್ತಿದ್ದು ಶ್ಲಾಘನೀಯ ಎಂದರು.

ಈ ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಪದ್ಮಾವತಿ ಎಂ.ಡಿ.,  ಮೇಲ್ವಿಚಾರಕರು ಜಯಪ್ರಸಾದ್ , ಕೃಷಿ ಮೇಲ್ವಿಚಾರಕರು ಪ್ರಮೋದ್, ಸೇವಾಪ್ರತಿನಿಧಿ ಸಲ್ಮಾ, ಶತಾಜ್ ಬಾನು, ನೇಸರ ಕೇಂದ್ರದ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*