ಡಾಕ್ಟರ್ ಭಾಸ್ಕರ್ ನೇತೃತ್ವದಲ್ಲಿ ಪತ್ರಿಕಾ ವಿತರಕರ ದಿನಾಚರಣೆ ಯಶಸ್ವಿ

ಭಾಸ್ಕರ ಪತ್ರಿಕೆ
0

ತಿಪಟೂರುದಿನಾಂಕ 4/09/2025 ರಂದು ನಗರದ ಹಾಸನ  ಸರ್ಕಲ್ ಶ್ರೀ ಶಿವಕುಮಾರ ಸ್ವಾಮೀಜಿ  ವೃತ್ತದ ಬಳಿ ಇರುವ ಭಾಸ್ಕರ ಪತ್ರಿಕೆಯ ಕಚೇರಿಯಲ್ಲಿ ಪತ್ರಿಕಾ ವಿತರಕರ ದಿನಾಚರಣೆಯನ್ನು ಭಾಸ್ಕರ ಪತ್ರಿಕಾ ಬಳಗದ ವತಿಯಿಂದ ಆಚರಿಸಲಾಯಿತು.

 ಈ ಸಂದರ್ಭದಲ್ಲಿ ಸಂಜೆವಾಣಿ ಹೇಮಾವತಿ ವಾಣಿ ಹಾಗೂ ಇತರೆ ಪತ್ರಿಕಾ ವಿತರಕರು ಮತ್ತು ಭಾಸ್ಕರ ಪತ್ರಿಕಾ ಬಳಗದ ವತಿಯಿಂದ  ಈ ತಾಂಡವ ಮೂರ್ತಿಯವರಿಗೆ ಅವರ ಸೇವೆಯನ್ನು ಗುರುತಿಸಿ ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಾಕ್ಟರ್ ಭಾಸ್ಕರ್ 50 ವರ್ಷದಿಂದ ಪತ್ರಿಕ ವಿತರಾಗಿ ಮಳೆ ಚಳಿ ಬಿಸಿಲು ಎನ್ನದೆ ನಮಗೆ ಹೊಸ ಲೋಕದ ಸುದ್ದಿ ತಲುಪಿಸುತ್ತಿರುವ ಪತ್ರಿಕ ವಿತರಕರ ಸೇವೆ ಅತ್ಯಂತ ಶ್ಲಾಘನೀಯ ಇವರು ಸ್ವಂತ ಪತ್ರಿಕೆ ಮುದ್ರಕವನ್ನು ನಡೆಸುತ್ತಾ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದು ಇವರ ಈ ಸೇವೆ ಶ್ಲಾಘನೀಯ ಎಂದು ಪ್ರಚಲಿಸಿದರು ಇವರಿಗೆ ಸರಕಾರ ಆರೋಗ್ಯ ವಿಮೆ ದ್ವಿಚಕ್ರ ವಾಹನ ಸೌಲಭ್ಯವನ್ನು ನೀಡಬೇಕೆಂದು ಒತ್ತಾಯಿಸಿದರು.

 ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಡಾಕ್ಟರ್ ಭಾಸ್ಕರ್ ಆಡಿಟರ್ ಕಾಶಿನಾಥ್ ಈಶ್ವರ್ ಕಲ್ಪತರು ವಿದ್ಯಾ ಸಂಸ್ಥೆ ನೌಕರರಾದ ಕುಮಾರ ಮಾದಿಹಳ್ಳಿ ಟಿಂಬರ್ ಕಿರಣ್  ಧರಣೇಶ್ ಕುಪ್ಪಾಳು, ನಟರಾಜು ಮತ್ತಿತ್ತರರು ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*