ಸೆ.2ರಿಂದ ಪದವಿ ವಿದ್ಯಾರ್ಥಿಗಳಿಗೂ ಬಿಸಿಯೂಟ: ರಾಜೇಂದ್ರ ರಾಜಣ್ಣ

ಭಾಸ್ಕರ ಪತ್ರಿಕೆ
0

ಮಧುಗಿರಿ: ಸೆ.2 ರಂದು ಪದವಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆಯನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ರಾಜೇಂದ್ರ ರಾಜಣ್ಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿಬ್ಬಂದಿಗೆ ತಿಳಿಸಿದರು.

ಅವರು ಶನಿವಾರ ಕಾಲೇಜಿಗೆ ಭೇಟಿ ನೀಡಿ, ಶೀಘ್ರದಲ್ಲೇ ಪ್ರಾರಂಭಗೊಳ್ಳಲಿರುವ ಶಾಸಕ ಕೆ.ಎನ್. ರಾಜಣ್ಣ ಅವರ ಕನಸಿನ ಮಹತ್ವಾಕಾಂಕ್ಷಿ ಯೋಜನೆಯಾದ ಗ್ರಾಮೀಣ ಭಾಗದಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಚಿತ ಬಿಸಿ ಊಟ ತಯಾರಿಸುವ ಪೂರ್ವ ಸಿದ್ಧತೆ ಬಗ್ಗೆ ಮಾಹಿತಿ ಪಡೆದರು. ಅಡುಗೆ ತಯಾರಿಕಾ ಕೊಠಡಿ, ಸುರಕ್ಷಿತ ಅನಿಲ ಘಟಕದ ವ್ಯವಸ್ಥೆ, ಭೋಜನ ಶಾಲೆ, ದಸ್ತಾನು ಮಳಿಗೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶುಚಿತ್ವ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಅವರು ಪರಿಶೀಲಿಸಿದರು.

ಕಾಲೇಜಿನಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಊಟದ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಊಟದಲ್ಲಿ ಉತ್ತಮ ಗುಣಮಟ್ಟದ ಆಹಾರ ಮತ್ತು ಶುಚಿತ್ವಕ್ಕೆ ಹೆಚ್ಚು ಒತ್ತು ನೀಡುವಂತೆ ಗುಣಮಟ್ಟ ಹಾಗೂ ಶುಚ್ಚತೆಗೆ ಆದ್ಯತೆ ನೀಡಬೇಕು. ಈ ಕಾರ್ಯದಲ್ಲಿ ಕಾಲೇಜು ಸಿಬ್ಬಂದಿ ಕೈಜೋಡಿಸಿ ಯಶಸ್ವಿಗೊಳಿಸಬೇಕಾಗಿದೆ.

— ರಾಜೇಂದ್ರ ರಾಜಣ್ಣ, ಎಂಎಲ್‌ಸಿ.

ಪ್ರಾನ್ಸುಪಾಲ. ಡಾ.ಕುಮಾರ್ ಕೆ.ಎಸ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್.ಬಿ, ಮುರಳೀಧರ್, ಮಂಜುನಾಥ್ ಬುಡುಸನಹಳ್ಳಿ, ಡಾ.ರಂಜಿತಾ, ನಟರಾಜ್, ನಾಗರಾಜು, ವೇದಲಕ್ಷ್ಮಿ, ಡಾ. ಲೀಲಾವತಿ, ರಾಮಮೂರ್ತಿ, ಡಾ. ಗೋವಿಂದರಾಯು, ಯೋಗೀಶ್‌ಕುಮಾರ್, ಡಾ.ಶ್ರೀನಿವಾಸಪ್ಪ, ಡಾ.ಸಂಜೀವಮೂರ್ತಿ, ಪುರಸಭಾ ಮಾಜಿ ಅಧ್ಯಕ್ಷರುಗಳಾದ ಎಂ.ಕೆ.ನಂಜುಂಡರಾಜು, ಲಾಲಾಪೇಟೆ ಮಂಜುನಾಥ್, ಮುಖಂಡರುಗಳಾದ ರಘುಯಾದವ್, ಅಲೀಮ್, ಮುನ್ನು ಸೇರಿದಂತೆ ಇತರೆ ಮುಖಂಡರುಗಳು, ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.


ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

The post ಸೆ.2ರಿಂದ ಪದವಿ ವಿದ್ಯಾರ್ಥಿಗಳಿಗೂ ಬಿಸಿಯೂಟ: ರಾಜೇಂದ್ರ ರಾಜಣ್ಣ appeared first on nammatumakuru.



from nammatumakuru https://ift.tt/lt42Nx7

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*