‘ಟಾಕ್ಸಿಕ್’ ಪ್ರೀ–ರಿಲೀಸ್ ಇವೆಂಟ್ ನಲ್ಲಿ ಅನಾಹುತ: ಸೌಂಡ್ ಬಾಕ್ಸ್ ಕುಸಿದು ಬಿದ್ದು ಹಲವರಿಗೆ ಗಾಯ!

ಭಾಸ್ಕರ ಪತ್ರಿಕೆ
0

ಹೈದರಾಬಾದ್: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್–ಅಪ್ಸ್’ (Toxic: A Fairy Tale for Grown–ups) ಚಿತ್ರದ ಪ್ರೀ–ರಿಲೀಸ್ ಕಾರ್ಯಕ್ರಮದಲ್ಲಿ ದುರಂತವೊಂದು ಸಂಭವಿಸಿದೆ. ಹೈದರಾಬಾದ್ ನ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಅದ್ದೂರಿ ಕಾರ್ಯಕ್ರಮದ ವೇಳೆ ಬೃಹತ್ ಸೌಂಡ್ಬಾಕ್ಸ್ ಹಾಗೂ ಲೈಟಿಂಗ್ ಕಂಬ ಕುಸಿದುಬಿದ್ದ ಪರಿಣಾಮ ಕೆಲವು ಅಭಿಮಾನಿಗಳು ಮತ್ತು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಉದ್ದೇಶಿಸಿ ನಟ ಯಶ್ ಅವರು ವೇದಿಕೆ ಮೇಲೆ ಮಾತನಾಡುತ್ತಿದ್ದ ಸಮಯದಲ್ಲೇ ಸ್ಟೇಜ್ ಮುಂಭಾಗದಲ್ಲಿ ನೆಡಲಾಗಿದ್ದ ಬೃಹತ್ ಸೌಂಡ್ ಬಾಕ್ಸ್ ಹಾಗೂ ಫ್ಲಡ್ ಲೈಟ್ ಕಂಬ ಕುಸಿದುಬಿದ್ದಿದೆ.

ಈ ಅನಾಹುತದಲ್ಲಿ ಹಲವು ಯುವಕ–ಯುವತಿಯರಿಗೆ ಗಾಯಗಳಾಗಿದ್ದು, ಭೀತಿಯಿಂದ ಓರ್ವ ವಿದ್ಯಾರ್ಥಿನಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ತಕ್ಷಣವೇ ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಸಂಭವಿಸುತ್ತಿದ್ದಂತೆಯೇ ಯಶ್ ಅವರು ತಮ್ಮ ಭಾಷಣವನ್ನು ಮಧ್ಯದಲ್ಲೇ ನಿಲ್ಲಿಸಿ, ಗಾಯಗೊಂಡ ವಿದ್ಯಾರ್ಥಿಗಳ ಕ್ಷೇಮ ವಿಚಾರಿಸಿದರು. ಪ್ರೇಕ್ಷಕರೆಲ್ಲರೂ ಶಾಂತಿಯಿಂದ ಇರುವಂತೆ ಮನವಿ ಮಾಡಿದ ಅವರು, ಆಯೋಜಕರಿಗೆ ತಕ್ಷಣವೇ ಸುರಕ್ಷತಾ ಕ್ರಮ ಕೈಗೊಳ್ಳಲು ಸೂಚಿಸಿದರು.

ವೇದಿಕೆಯ ಹತ್ತಿರಕ್ಕೆ ಬರಲು ಹಾಗೂ ಯಶ್ ಅವರನ್ನು ನೋಡಲು ಕೆಲವು ಅಭಿಮಾನಿಗಳು ಸೌಂಡ್ ಬಾಕ್ಸ್ ಮತ್ತು ಉಪಕರಣಗಳನ್ನು ಕಟ್ಟಿದ್ದ ಕಂಬಗಳನ್ನು ಹತ್ತಲು ಯತ್ನಿಸಿದ್ದೇ ಕಂಬ ಕುಸಿಯಲು ಕಾರಣ ಎನ್ನಲಾಗಿದೆ. ಅತಿಯಾದ ಜನಸ್ತೋಮ ನೆರೆದಿದ್ದರಿಂದ ಜನಸಂದಣಿ ನಿಯಂತ್ರಿಸುವುದು ಪೊಲೀಸರಿಗೂ ಸವಾಲಾಗಿತ್ತು.

ಗೀತು ಮೋಹನ್ ದಾಸ್ ನಿರ್ದೇಶನದ ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ ಹಾಗೂ ಹುಮಾ ಖುರೇಷಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

The post ‘ಟಾಕ್ಸಿಕ್’ ಪ್ರೀ–ರಿಲೀಸ್ ಇವೆಂಟ್ ನಲ್ಲಿ ಅನಾಹುತ: ಸೌಂಡ್ ಬಾಕ್ಸ್ ಕುಸಿದು ಬಿದ್ದು ಹಲವರಿಗೆ ಗಾಯ! appeared first on Mahanayaka.



from Mahanayaka https://ift.tt/5agXzxB

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*