ನೆಲ್ಯಾಡಿಯಲ್ಲಿ ಭೀಕರ ಅಪಘಾತ: ಟ್ಯಾಂಕರ್ ಹಾಗೂ ಎರಡು ಟ್ರಕ್ ಗಳ ನಡುವೆ ಡಿಕ್ಕಿ

ಭಾಸ್ಕರ ಪತ್ರಿಕೆ
0

ನೆಲ್ಯಾಡಿ: ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯಲ್ಲಿ ಮುಂಜಾನೆಯ ವೇಳೆ ಟ್ಯಾಂಕರ್ ಹಾಗೂ ಎರಡು ಟ್ರಕ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ನೆಲ್ಯಾಡಿಯ ವಿದ್ಯಾನಗರದ ಸೈಂಟ್ ಜಾರ್ಜ್ ಕಾಲೇಜು ಹಾಗೂ ಬೆಥನಿ ವಿದ್ಯಾ ಸಂಸ್ಥೆಯ ನಡುವಿನ ಮುಖ್ಯ ರಸ್ತೆಯಲ್ಲಿ ಮುಂಜಾನೆ 5:00 ರಿಂದ 5:30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.


ಲಿಕ್ಕರ್ (ಮದ್ಯ) ಸಾಗಾಟ ಮಾಡುತ್ತಿದ್ದ ಟ್ರಕ್‌ ಗೆ ಮತ್ತೊಂದು ಟ್ರಕ್ ಹಿಂದಿನಿಂದ ಬಂದು ಜೋರಾಗಿ ಡಿಕ್ಕಿ ಹೊಡೆದಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ಟ್ರಕ್ ರಸ್ತೆ ವಿಭಜಕದ (ಡಿವೈಡರ್) ಮೇಲೆ ಹತ್ತಿದೆ.  ಅಪಘಾತದಿಂದ ನಜ್ಜುಗುಜ್ಜಾದ ಲಿಕ್ಕರ್ ಸಾಗಾಟದ ವಾಹನ ಸಮೀಪದಲ್ಲೇ ತೆರಳುತ್ತಿದ್ದ ಟ್ಯಾಂಕರ್ ಗೆ ತಾಗಿದೆ ಎಂದು ಟ್ಯಾಂಕರ್ ಚಾಲಕ ಮಹಾನಾಯಕಕ್ಕೆ ತಿಳಿಸಿದ್ದಾರೆ.


ಅಪಘಾತ ಸಂಭವಿಸಿದ ಈ ಪ್ರದೇಶದಲ್ಲಿ ವಾಹನಗಳ ಅತಿವೇಗವನ್ನು ನಿಯಂತ್ರಿಸಲು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸ್ಥಳದಲ್ಲಿ ಯು–ಟರ್ನ್ (U-turn) ನಿರ್ಮಿಸುವಂತೆ ಹಾಗೂ ಸ್ಪೀಡ್ ಕಡಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಇತ್ತೀಚೆಷ್ಟೇ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು, ಆದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಇನ್ನೂ ಅಪಘಾತದಲ್ಲಿ ಇಬ್ಬರು ಟ್ರಕ್ ಚಾಲಕರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದರೆ, ಟ್ಯಾಂಕರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

The post ನೆಲ್ಯಾಡಿಯಲ್ಲಿ ಭೀಕರ ಅಪಘಾತ: ಟ್ಯಾಂಕರ್ ಹಾಗೂ ಎರಡು ಟ್ರಕ್ ಗಳ ನಡುವೆ ಡಿಕ್ಕಿ appeared first on Mahanayaka.



from Mahanayaka https://ift.tt/WGBR0ES

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*