ಸೌಜನ್ಯ ಪ್ರಕರಣ ಮರು ತನಿಖೆ: ಎನ್.ಶಶಿಕುಮಾರ್ ನೇತೃತ್ವದಲ್ಲಿ ನೂತನ ಎಸ್‌ ಐಟಿ ತಂಡ ರಚನೆ

ಭಾಸ್ಕರ ಪತ್ರಿಕೆ
0

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಹುಚರ್ಚಿತ 14 ವರ್ಷಗಳ ಹಿಂದಿನ ಬೆಳ್ತಂಗಡಿ ಬಾಲಕಿ  ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಕರಣದ ಮರುತನಿಖೆಗಾಗಿ ಹಿರಿಯ ಐಪಿಎಸ್ ಅಧಿಕಾರಿ, ಐಜಿಪಿ ಎನ್.ಶಶಿಕುಮಾರ್ ನೇತೃತ್ವದಲ್ಲಿ ನೂತನ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ಆದೇಶ ಹೊರಡಿಸಲಾಗಿದೆ.

ಈ ಹಿಂದೆ ಸಿಐಡಿ ಮುಖ್ಯಸ್ಥ ಪ್ರಣವ್ ಮೊಹಂತಿ ನೇತೃತ್ವದಲ್ಲಿದ್ದ ಎಸ್‌ ಐಟಿಯ ಸುದೀರ್ಘ ತನಿಖಾ ವರದಿಯ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೆ, ಹಿಂದಿನ ತಂಡದ ಸದಸ್ಯರನ್ನು ಹೊರತುಪಡಿಸಿ, ಇತರೆ ಅಧಿಕಾರಿಗಳ ನೇತೃತ್ವದಲ್ಲಿ ಮರುತನಿಖೆ ನಡೆಸಿ ನಿಗದಿತ ಅವಧಿಯಲ್ಲಿ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ಹಳೆಯ ತಂಡದಲ್ಲಿದ್ದ ಕೆಲ ಅಧಿಕಾರಿಗಳು ಲಿಖಿತ ರೂಪದಲ್ಲಿ ಮನವಿ ಮಾಡಿ ತನಿಖೆಯಿಂದ ಹಿಂದೆ ಸರಿದಿದ್ದರು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸರ್ಕಾರ ಈಗ ಹೊಸ ಎಸ್‌ ಐಟಿಯನ್ನು ಅಸ್ತಿತ್ವಕ್ಕೆ ತಂದಿದೆ.

ನೂತನ ಎಸ್‌ ಐಟಿ ತಂಡದ ಸದಸ್ಯರು:

ಮುಖ್ಯಸ್ಥರು: ಐಜಿಪಿ ಎನ್.ಶಶಿಕುಮಾರ್ (ಹುಬ್ಬಳ್ಳಿ-ಧಾರವಾಡ ಮಾಜಿ ಪೊಲೀಸ್ ಆಯುಕ್ತರು)

ಸದಸ್ಯರು:

  • ಸಿ.ಹೆಚ್. ಸುಧೀರ್ ಕುಮಾರ್ ರೆಡ್ಡಿ (ಮಂಗಳೂರು ಪೊಲೀಸ್ ಆಯುಕ್ತರು, ಡಿಐಜಿ)
  • ನಿಶಾ ಜೇಮ್ಸ್ (ರಾಜ್ಯ ಗುಪ್ತವಾರ್ತೆ ಎಸ್‌ಪಿ)
  • ಲೋಕೇಶ್ ಜಗಲಸಾರ್ (ಸಿಐಡಿ ಎಸ್‌ಪಿ)
  • ವೆಂಕಟೇಶ್ ಪ್ರಸನ್ನ (ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಎಸ್‌ಪಿ)

ಪ್ರಕರಣದ ತನಿಖೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ನೂತನ ಎಸ್‌ ಐಟಿ ಮುಖ್ಯಸ್ಥರು ತಮ್ಮ ತಂಡದ ಸದಸ್ಯರೊಂದಿಗೆ ಪ್ರಮುಖ ಸಭೆ ನಡೆಸಲಿದ್ದು, ಹಿಂದಿನ ಎಸ್‌ಐಟಿ ತಂಡದಿಂದ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳು ಹಾಗೂ ದಾಖಲೆಗಳನ್ನು ಹಸ್ತಾಂತರಿಸಿಕೊಳ್ಳುವ ಕುರಿತು ಸಮಾಲೋಚನೆ ನಡೆಸಲಿದ್ದಾರೆ.

The post ಸೌಜನ್ಯ ಪ್ರಕರಣ ಮರು ತನಿಖೆ: ಎನ್.ಶಶಿಕುಮಾರ್ ನೇತೃತ್ವದಲ್ಲಿ ನೂತನ ಎಸ್‌ ಐಟಿ ತಂಡ ರಚನೆ appeared first on Mahanayaka.



from Mahanayaka https://ift.tt/eMSa80g

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*