ನೆಲಮಂಗಲದ ಗೀತಾ ಮಾತಾಜಿ: ಬಾಲಕೃಷ್ಣನೊಂದಿಗೆ 4 ವರ್ಷಗಳಿಂದ ನಿರಂತರ ಪಾದಯಾತ್ರೆ

ಭಾಸ್ಕರ ಪತ್ರಿಕೆ
0

ಕೊಟ್ಟಿಗೆಹಾರ:  ನೆಲಮಂಗಲ ಮೂಲದ ಗೀತಾ ಮಾತಾಜಿ ಅವರು ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಪಾದಯಾತ್ರೆಯ ಮೂಲಕವೇ ಪ್ರಸಿದ್ಧ ಪುಣ್ಯಕ್ಷೇತ್ರಗಳಿಗೆ ತೆರಳಿ ದೇವರ ದರ್ಶನ ಪಡೆಯುವ ಅಪರೂಪದ ಧಾರ್ಮಿಕ ವ್ರತವನ್ನು ಮುಂದುವರಿಸಿದ್ದಾರೆ.

ಈ ಹಿಂದೆ ಕಾಶಿ, ತಿರುಪತಿ ಸೇರಿದಂತೆ ಹಲವು ಪ್ರಸಿದ್ಧ ತೀರ್ಥಕ್ಷೇತ್ರಗಳಿಗೆ ಕಾಲ್ನಡಿಗೆಯಲ್ಲೇ ತೆರಳಿದ್ದ ಅವರು, ಈ ವರ್ಷವೂ ತಮ್ಮ ಭಕ್ತಿಯ ಪಯಣವನ್ನು ಶೃಂಗೇರಿ, ಹೊರನಾಡು, ಕಳಸ, ಧರ್ಮಸ್ಥಳ, ಉಡುಪಿ, ಮುರುಡೇಶ್ವರ ಹಾಗೂ ಗೋಕರ್ಣ ಕ್ಷೇತ್ರಗಳ ದರ್ಶನದತ್ತ ಮುಂದುವರಿಸಿದ್ದಾರೆ.

ಈ ಬಾರಿಯ ಪಾದಯಾತ್ರೆಯಲ್ಲಿ ಗೀತಾ ಮಾತಾಜಿ ಅವರೊಂದಿಗೆ ಕಂಗೊಳಿಸುತ್ತಿರುವ ಬಾಲಕೃಷ್ಣನ ರೂಪ ಭಕ್ತರ ವಿಶೇಷ ಗಮನ ಸೆಳೆಯುತ್ತಿದೆ. ಕಿರೀಟ, ಆಭರಣಗಳು, ಆಕರ್ಷಕ ಹೂವಿನ ಹಾರಗಳು ಹಾಗೂ ಸಾಂಪ್ರದಾಯಿಕ ವಸ್ತ್ರಗಳಿಂದ ಕಂಗೊಳಿಸುವ ಪುಟ್ಟ ಬಾಲಕೃಷ್ಣನನ್ನು ಜೊತೆಯಲ್ಲಿಯೇ ಕರೆದೊಯ್ಯುತ್ತಿರುವುದು ದಾರಿಯುದ್ದಕ್ಕೂ ಜನರ ಕಣ್ಮನ ಸೆಳೆಯುತ್ತಿದೆ.

“ಹೆಜ್ಜೆ ಹೆಜ್ಜೆಯಲ್ಲೂ ಭಕ್ತಿ, ಜೊತೆಯಲ್ಲಿ ಬಾಲಕೃಷ್ಣ” ಎಂಬಂತೆ ಸಾಗುತ್ತಿರುವ ಇವರ ಧಾರ್ಮಿಕ ಶ್ರದ್ಧೆ ಹಾಗೂ ಅಚಲ ನಂಬಿಕೆಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಕೊಟ್ಟಿಗೆಹಾರ. ಚಾರ್ಮಾಡಿ ಘಾಟ್ ಮೂಲಕ ಹಾದುಹೋದ ಇವರಿಗೆ  ಸ್ಥಳೀಯ ಜನತೆ ಅಪಾರ ಮೆಚ್ಚುಗೆ ಸೂಚಿಸಿ ಶುಭ ಹಾರೈಸಿದ್ದಾರೆ.

The post ನೆಲಮಂಗಲದ ಗೀತಾ ಮಾತಾಜಿ: ಬಾಲಕೃಷ್ಣನೊಂದಿಗೆ 4 ವರ್ಷಗಳಿಂದ ನಿರಂತರ ಪಾದಯಾತ್ರೆ appeared first on Mahanayaka.



from Mahanayaka https://ift.tt/M7Ewu9x

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*