ಇಂದು ತುಮಕೂರಿಗೆ ಭೇಟಿಕೊಡಲಿದೆ ಕೇಂದ್ರದ ಬರ ಅಧ್ಯಯನ ತಂಡ: ರೈತರ ಬೇಡಿಕೆಗಳೇನು?

ಭಾಸ್ಕರ ಪತ್ರಿಕೆ
0

ತುಮಕೂರು: ರಾಜ್ಯಕ್ಕೆ ಭೇಟಿಕೊಡಲಿರುವ ಕೇಂದ್ರದ ಬರ ಅಧ್ಯಯನ ತಂಡ ಇಂದು ತುಮಕೂರು ಜಿಲ್ಲೆಗೆ ಭೇಟಿ ಕೊಡುತ್ತಿದ್ದು, ಜಿಲ್ಲೆಯ ಬೆಳೆನಷ್ಟ ಪರಿಸ್ಥಿತಿಯನ್ನು ಅವಲೋಕಿಸಲಿದೆ.

ಐಎಂಟಿಸಿ(ಅಂತರ ಸಚಿವಾಲಯ ಕೇಂದ್ರ ಟೀಂ) ತಂಡದ ಅಧಿಕಾರಿಗಳು, ಪ್ರತಿನಿಧಿಗಳು ಬೆಂಗಳೂರಿನಿಂದ ಹೊರಟು ತುಮಕೂರಿಗೆ ಬೆಳಗ್ಗೆ 11.30ಕ್ಕೆ ತಲುಪಲಿದ್ದು, ಮೊದಲೆಗೆ ಹಿರೇಹಳ್ಳಿ ಟೋಲ್ ಬಳಿ ಜಿಲ್ಲಾಡಳಿತದಿಂದ ಅವರನ್ನು ಸ್ವಾಗತಿಸಿ ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಕರೆದೊಯ್ಯಲಾಗುತ್ತಿದೆ. ಅಲ್ಲಿ 11.45ರವರೆಗೆ ಮಧ್ಯಾಹ್ನ 1ವರೆಗೆ ಕೇಂದ್ರ ತಂಡಕ್ಕೆ ಜಿಲ್ಲೆಯ ಬರ, ಮಳೆ–ಬೆಳೆ, ಕುಡಿಯುವ ನೀರು, ಅಂತರ್ಜಲ ಕುಸಿತ ಬಗ್ಗೆ ಪ್ರಾತ್ಯಕ್ಷಿಕೆ ಸಹಿತ ವಿವರಣೆಯನ್ನು ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ನೀಡಲಿದ್ದಾರೆ.

ಬಳಿಕ 1.50ಕ್ಕೆ ತುಮಕೂರು ತಾಲೂಕು ಅಮ್ಮಸಂದ್ರದ ರೈತರಾದ ಸರ್ವಮಂಗಳ ಹಾಗೂ ರಾಮಯ್ಯ ಅವರ ಜಮೀನಿಗೆ ಭೇಟಿ ಕೊಡುವ ತಂಡ ಅಲ್ಲಿಂದ ಸಮೀಪದ ಹೊಸಹಳ್ಳಿ ಗ್ರಾಮಕ್ಕೆ ತೆರಳಿ ಕೆ.ಎಲ್.ದ್ವಾರಕನಾಥ್ ಅವರ ರಾಗಿ ತೋಟಕ್ಕೆ ಭೇಟಿ ಕೊಡುವರು. ನಂತರ ಮಧ್ಯಾಹ್ನ 2.38ಕ್ಕೆ ಕೊರಟಗೆರೆ ತಾಲೂಕಿಗೆ ಭೇಟಿಕೊಡುವ ತಂಡ ಕಂಬಡಹಳ್ಳಿ ಗ್ರಾಮಕ್ಕೆ ಭೇಟಿಕೊಟ್ಟು ರೈತರಾದ ರಾಜೇಶ್ವರಿ, ಆಮರನಾಥ್, ರಂಗನಾಥ್ ಅವರ ಜಮೀನಿನಲ್ಲಿ ಬಿತ್ತಿದ ಜೋಳ ನಷ್ಟವಾಗಿರುವ ಬಗ್ಗೆ ಮಾಹಿತಿ ಕಳುಹಿಸುವರು.

ಬಳಿಕ ಮಧ್ಯಾಹ್ನ 3ಕ್ಕೆ ತುಮಕೂರು ಗೊಳ್ಳಹಳ್ಳಿ  ಗ್ರಾಮಕ್ಕೆ ಭೇಟಿಕೊಡುವ ತಂಡ ವಿಬಿಜಿರಾಮ್ ಜೀ ಯೋಜನೆಯಡಿ ನಿರ್ಮಿಸಿರುವ ಗೋಕಟ್ಟೆಯನ್ನು ವೀಕ್ಷಿಸಲಿದ್ದಾರೆ. ನಂತರ ಮಧ್ಯಾಹ್ನ 3.30ಕ್ಕೆ ಮಧುಗಿರಿ ತಾಲ್ಲೂಕಿಗೆ ಭೇಟಿ ಕೊಡುವ ತಂಡ ಮಿಡತಹಳ್ಳಿ ಗ್ರಾಮದ ರೈತರಾದ ಎಂ.ಎಲ್.ಶಿವಣ್ಣ, ಲಕ್ಷ್ಮೀನರಸಪ್ಪ ಅವರ ಜಮೀನಿನಲ್ಲಿ ಶೇಂಗಾ ಬೆಳೆಯನ್ನು ಪರಿಶೀಲಿಸಲಿದೆ.

ನಂತರ ಇಂದಿರಾಗ್ರಾಮ ಹಾಗೂ ಜಯನಗರ ಗ್ರಾಮದಲ್ಲಿ ಕೊಳವೆ ಬಾವಿಯನ್ನು ಪರಿಶೀಲಿಸಿ ಸಿರಾ ಮೂಲಕ ಚಿತ್ರದುರ್ಗ ಜಿಲ್ಲೆ ಪ್ರವೇಶಿಸಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.

ಹತ್ತು ತಾಲ್ಲೂಕು ಪೂರ್ಣ ಬರ, 3 ತಾಲ್ಲೂಕುಗಳಲ್ಲಿ ಮಾತ್ರ ವೀಕ್ಷಣೆ: ತುಮಕೂರು ಜಿಲ್ಲೆಯ ಹತ್ತು ತಾಲ್ಲೂಕುಗಳು ಬರ ಪೀಡಿತವೆಂದು ಘೋಷಣೆಮಾಡಿದ್ದು, ಕೇಂದ್ರದ ಬರ ವೀಕ್ಷಣೆ ತಂಡ ಕೇವಲ ತುಮಕೂರು, ಕೊರಟಗೆರೆ, ಮಧುಗಿರಿಗೆ ಮಾತ್ರ ಭೇಟಿಕೊಡುತ್ತಿದ್ದು, ಉಳಿದ 7 ತಾಲ್ಲೂಕುಗಳ ಬರ ಪರಿಸ್ಥಿತಿಯನ್ನು ಕೇಂದ್ರ ತಂಡ ಗಮನಿಸಬೇಕು ಎಂಬ ಒತ್ತಾಯ ರೈತರಿಂದ ಕೇಳಿಬಂದಿದೆ.

ರಾಗಿ, ಜೋಳ, ಶೇಂಗಾ ಬೆಳೆಯುವ ಕೃಷಿ ಬೆಳೆ ಪ್ರದೇಶಗಳಿಗೆ ಮಾತ್ರ ತಂಡ ಭೇಟಿಕೊಡುತ್ತಿದ್ದು, ಶೇಂಗಾ ಅತೀ ಹೆಚ್ಚು ಬೆಳೆಯುವ ಪಾವಗಡ, ಸಿರಾಕ್ಕೂ ಭೇಟಿ ಕೊಟ್ಟು ನಷ್ಟ ಅವಲೋಕಿಸಬೇಕಿತ್ತು ಎಂಬ ಅಭಿಪ್ರಾಯ ಕೇಳಿಬಂದಿದೆ.

ನವದೆಹಲಿಯ ವಿಶೇಷ ಪ್ರತಿನಿಧಿಯಾಗಿರುವ ಸಿರಾ ಶಾಸಕರ ಕ್ಷೇತ್ರಕ್ಕೆ ಕೇಂದ್ರ ತಂಡ ಭೇಟಿ ಕೊದಿರುವುದು ಚರ್ಚೆಗೆ ಗ್ರಾಸವಾಗಿದೆ. ಇನ್ನು ಜಿಲ್ಲೆಯ ಪ್ರಮುಖ ತೋಟಗಾರಿಕಾ ಬೆಳೆಯಾದ ತೆಂಗು, ಅಡಿಕೆ ಗುಬ್ಬಿ, ತುರುವೇಕೆರೆ, ತಿಪಟೂರು ಭಾಗದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದು, ತೆಂಗು-ಅಡಿಕೆ ಪ್ರದೇಶದ ಹಾನಿಯನ್ನು ಕೇಂದ್ರ ತಂಡ ಮುದ್ದು ವೀಕ್ಷಣೆಮಾಡಲು ಮುಂದಾಗಿರುವುದು ಸಹ ತೆಂಗು ಬೆಳೆಗಾರರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

159.52 ಕೋಟಿಗೂ ಅಧಿಕ ಬೆಳೆನಷ್ಟ

ಜಿಲ್ಲೆಯಲ್ಲಿ 1.92 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬರದಿಂದಾಗಿ ಬೆಳೆಹಾನಿಯಾಗಿದ್ದು, 159 ಕೋಟಿಗೂ ಅಧಿಕ ಮುಂಗಾರು ಬೆಳೆನಷ್ಟವನ್ನು ಪ್ರಸ್ತಾವನೆ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಜಿಲ್ಲೆಗೆ ಆಗಮಿಸಿರುವ ಕೇಂದ್ರ, ಐಎಂಟಿಸಿ ತಂಡಕ್ಕೆ ಸಮಗ್ರ, ಪ್ರಾತ್ಯಕ್ಷಿಕೆ ಮೂಲಕ ಬರದ ಸಮಗ್ರ ಪರಿಸ್ಥಿತಿ ವಿವರಿಸಲಾಗುವುದು. ತುಮಕೂರು, ಕೊರಟಗೆರೆ, ಮಧುಗಿರಿಯಲ್ಲಿ ತಂಡವು ರಾಗಿ, ಜೋಳ, ಶೇಂಗಾದ ಬೆಳೆ ಪರಿಸ್ಥಿತಿ, ಕೊಳವೆ ಬಾವಿ, ಗೋಕಟ್ಟೆಯನ್ನು ಪರಿಶೀಲಿಸಿದೆ.

— ಶುಭ ಕಲ್ಯಾಣ್, ಜಿಲ್ಲಾಧಿಕಾರಿ.


ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

The post ಇಂದು ತುಮಕೂರಿಗೆ ಭೇಟಿಕೊಡಲಿದೆ ಕೇಂದ್ರದ ಬರ ಅಧ್ಯಯನ ತಂಡ: ರೈತರ ಬೇಡಿಕೆಗಳೇನು? appeared first on nammatumakuru.



from nammatumakuru https://ift.tt/x8Yw2eJ

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*