ಅ.16 ರಿಂದ ಬೆಳಗಾವಿ-ಮುಣುಗೂರು ಎಕ್ಸ್ ಪ್ರೆಸ್ ರೈಲು ಸಂಚಾರ ಆರಂಭ:ಡಾ.ಬಾಬುರಾವ್

ಭಾಸ್ಕರ ಪತ್ರಿಕೆ
0

ರಾಯಚೂರು: ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿದ್ದ ಬೆಳಗಾವಿ-ಮುಣುಗೂರ ಎಕ್ಸಪ್ರೆಸ್ ರೈಲ್ವೆ ಸಂಚಾರವನ್ನು ಪುನರಾರಂಭಿಸಲು ರೈಲ್ವೆ ಇಲಾಖೆ ಮುಂದಾಗಿದೆ ಎಂದು ರೈಲ್ವೆ ಸಲಹಾ ಮಂಡಳಿ ಮಾಜಿ ಸದಸ್ಯ ಡಾ.ಬಾಬುರಾವ್ ಅವರು ತಿಳಿಸಿದ್ದಾರೆ. ರೈಲ್ವೆ ಸಂಖ್ಯೆ 07335/07336 ಬೆಳಗಾವಿಯಿಂದ ವಾರದಲ್ಲಿ ರವಿವಾರ, ಬುಧವಾರ, ಶನಿವಾರ, ಮಂಗಳವಾರ ನಾಲ್ಕು ದಿನ ಬೆಳಗಾವಿಯಿಂದ ಸಂಚರಿಸುವ ರೈಲು ಮುಣುಗೂರಿನಿಂದ ವಾರದಲ್ಲಿ ಸೋಮವಾರ, ಗುರುವಾರ, ರವಿವಾರ ಮತ್ತು ಬುಧವಾರ ಸಂಚರಿಸಲಿದೆ. ಈ ರೈಲು ಗದಗ, ಹೊಸಪೇಟೆ, ಬಳ್ಳಾರಿ, ಗುಂತಕಲ್, ಮಂತ್ರಾಲಯಂ, ರಾಯಚೂರು, ಯಾದಗಿರಿ, ಚಿತ್ತಾಪೂರ, ಸಿಕಂದ್ರಬಾದ್ ಗಳಲ್ಲಿ ನಿಲುಗಡೆಯಾಗಲಿದೆ. ಅ.16ರಂದು ರೈಲು ಸಂಚಾರ ಆರಂಭವಾಗಲಿದೆ ಎಂದು ತಿಳಿಸಿರುವ ಡಾ. ಬಾಬುರಾವ್ ಅವರು, ಇತ್ತೀಚೆಗೆ ರಾಯಚೂರಿಗೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಆಗಮಿಸಿದ್ದ ವೇಳೆ ಈ ರೈಲು ಸಂಚಾರವನ್ನು ಪುನರಾರಂಭಿಸಬೇಕೆಂದು ಮನವಿ ಸಲ್ಲಿಸಲಾಗಿತ್ತು. ಮನವಿ ಸ್ಪಂದಿಸಿರುವ ಸಚಿವರು ಈಗ ಪ್ರಯಾಣಿಕರ ಅನುಕೂಲಕ್ಕೆ ರೈಲು ಓಡಿಸಲು ನಿರ್ಧರಿಸಿದ್ದು ಸ್ವಾಗತಾರ್ಹವಾಗಿದೆ. ಹಾಗೂ ಸಚಿವರು ಅಭಿನಂದನಾರ್ಹರಾಗಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*