ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇಲಾಖೆಗಳನ್ನು ಸ್ಥಾಳಂತರಿಸಿ:ಕಾಶಿನಾಥ ಕುರ್ಡಿ

ಭಾಸ್ಕರ ಪತ್ರಿಕೆ
0






ಮಾನ್ವಿ: ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ತಾ.ಪಂ.ಇ.ಓ. ಖಾಲೀದ್ ಅಹಮ್ಮದ್ ರವರಿಗೆ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಸಂಚಾಲಕರಾದ ಕಾಶಿನಾಥ ಕುರ್ಡಿ ಮನವಿ ಸಲ್ಲಿಸಿ ಪಟ್ಟಣದ ಬಸ್ ನಿಲ್ದಾಣದಿಂದ ಬಹುಳ ದೂರ ಇರುವ ಕಚೇರಿಗಳಿಗೆ ಗ್ರಾಮೀಣ ಭಾಗದ ಜನರು ಭೇಟಿ ಮಾಡುವುದಕ್ಕೆ ಅನಾನುಕೂಲವಾಗಲಿದ್ದು ತಾ.ಪಂ. ಹಳೆ ಕಟ್ಟಡವು ಮುಖ್ಯ ರಸ್ತೆಯಲ್ಲಿರುವುದರಿಂದ ಪಟ್ಟಣದಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಾಜ ಕಲ್ಯಾಣ ಇಲಾಖೆ,ಹಿಂದುಳಿದ ವರ್ಗಗಳ ಇಲಾಖೆ,ಶಿಶು ಅಭಿವೃದ್ದಿ ಇಲಾಖೆ,ಪ.ಪಂಗಡ ಇಲಾಖೆಗಳನ್ನು ಸ್ಥಾಳಂತರಿಸಿದಲ್ಲಿ ಗ್ರಾಮೀಣ ಭಾಗದ ಜನರಿಗೆ ಕಚೇರಿಗಳಲ್ಲಿನ ಅಧಿಕಾರಿಗಳನ್ನು ಭೇಟಿ ಮಾಡುವುದಕ್ಕೆ ಸಾಕಷ್ಟು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಹುಸೇನಪ್ಪ ನಂದಿಹಾಳ, ತಾಲೂಕು ಪ್ರಧಾನ ಕಾರ್ಯದರ್ಶಿ ತಾಯಣ್ಣ ಕಪಗಲ್, ಪ್ರಧಾನ ಕಾರ್ಯದರ್ಶಿ ಬಸವರಾಜ ಪೋತ್ನಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*