ಬೆಂಗಳೂರು: 11/10/2024ರಂದು ಹೈವೇ ಯೋಜನೆಗೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಪ್ರಮುಖ ಅಧಿಕಾರಿಗಳು ಅಮಾನತಾಗಿದ್ದಾರೆ.
(NHAI)ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯದ ಕಾಮಗಾರಿಗಳನ್ನು ಪ್ರಧಾನವಾಗಿ ನೇತೃತ್ವ ತೆಗೆದುಕೊಳ್ಳುವುದು ಅಲ್ಲಿನ ಮುಖ್ಯ ಇಂಜಿನಿಯರ್‌ಗಳು. ಎರಡು ಸರ್ಕಲ್,ಏಳು ಡಿವಿಜನ್ ಹೊಂದಿದ್ದು, ಈಗ ಈ ಎರಡೂ ವೃತ್ತಗಳ ಮುಖ್ಯ ಇಂಜಿನಿಯರ್ ಸೇವೆಯಿಂದ ಅಮಾನತುಗೊಂಡಿದ್ದಾರೆ.
ಮೇಟಿ ಇಲ್ಲದೇ ಕೆಲಸ ಹೆಂಗೆ? ಇಲಾಖೆಯಿಂದ ತಕ್ಷಣ ಹೊಸ ನೇಮಕ ಮಾಡಬೇಕಾದ ಪರಿಸ್ಥಿತಿ ಒದಗಿದೆ,
ರಾಷ್ಟ್ರೀಯ ಹೆದ್ದಾರಿಗಳು (ಉತ್ತರ ವಲಯ, ಬೆಳಗಾವಿ) ಮುಖ್ಯ ಅಭಿಯಂತರ ಮನ್ಮಥಯ್ಯ ಸ್ವಾಮಿ ಹಾಗೂ ದಕ್ಷಿಣ ವಲಯ (ಬೆಂಗಳೂರು)ದ ಮುಖ್ಯ ಅಭಿಯಂತರ ಕೆ.ಜಿ.ಜಗದೀಶ್ ಸೇವೆಯಿಂದ ಅಮಾನತುಗೊಂಡಿದ್ದಾರೆ,
ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು, 1957ರ ನಿಯಮದಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಜಗದೀಶ್ ಹಾಗೂ ಮನ್ಮಥಸ್ವಾಮಿ ವಿರುದ್ಧ ಅಸಮತೋಲನ ಆಸ್ತಿ ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ ಬಾಕಿ ಇಟ್ಟು ಸರ್ಕಾರಿ ಸೇವೆಯಿಂದ ಅಮಾನತ್ತಿನಲ್ಲಿರಿಸಿ ಆದೇಶಿಸಲಾಗಿದೆ.ಅಧಿಕಾರಿಗಳ ಅಮಾನತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುತಿ ಪಡೆದೇ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಭಾಸ್ಕರ ಪತ್ರಿಕೆ ಮನ್ಮಥಸ್ವಾಮಿ ಅವರನ್ನು ಸಂದರ್ಶಿಸಿದಾಗ, ವರದಿ ತಪ್ಪಾಗಿದೆ ನನ್ನದೇನೂ ತಪ್ಪಿಲ್ಲ ಆದರೂ ಈ ಅಮಾನತ್ತು ಬೇಸರ ತಂದಿದೆ, ನಾನೂ ಪತ್ರ ಬರೆದಿದ್ದೇನೆ ನೋಡೋಣ ಎಂದಿದ್ದಾರೆ.
