ವಿ ಆರ್ ತಾಳಿಕೋಟಿ ಗೆ ಕರುನಾಡ ಪದ್ಮಶ್ರೀ ಪ್ರಶಸ್ತಿ..!

ಭಾಸ್ಕರ ಪತ್ರಿಕೆ
0

ಶ್ರೀ ವಿ. ಆರ್‌ ತಾಳಿಕೋಟಿರವರಿಗೆ ಪ್ರಧಾನವಾಗಲಿರುವ "ಕರುನಾಡ ಪದ್ಮಶ್ರೀ ಪ್ರಶಸ್ತಿ"




ತಾವರಗೇರಾ: ಪಟ್ಟಣದ ಹಿರಿಯ ಪತ್ರಕರ್ತರು ಹಾಗೂ ಭಾರತೀಯ ಪತ್ರಕರ್ತರ ಒಕ್ಕೂಟದ ಕಾರ್ಯಕಾರಿ ಮಂಡಳಿ ಸದಸ್ಯರು ಆಗಿರುವ ವಿರುಪಾಕ್ಷಪ್ಪ ತಾಳಿಕೋಟಿ ಅವರು ಕರುನಾಡ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕರ್ಮಭೂಮಿ ಕನ್ನಡ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಗೋವಾದ ಬಿಚ್ಚಲಿ ಯಲ್ಲಿ ಅಕ್ಟೋಬರ್ 27ರಂದು

ನಡೆಯಲಿರುವ ಕನ್ನಡ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ ಎಂದು ಈ ಕುರಿತು ಕರ್ನಾಟಕ ಜಾಗೃತಿ ವೇದಿಕೆ ಸಂಚಾಲಕರಾದ ಮಹೇಶ್ ಬಾಬು ಸುರ್ವೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ. ಭಾಸ್ಕರ್‌, ಭಾಸ್ಕರ ಪತ್ರಿಕೆ ಪ್ರಧಾನ ಸಂಪಾದಕರು


ಇವರಿಗೆ ತಿಪಟೂರಿನ ಭಾಸ್ಕರ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ. ಭಾಸ್ಕರ್‌ ಹಾಗೂ ಭಾಸ್ಕರ ಪತ್ರಿಕಾ ಬಳಗದ ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*