ಪ್ರಿಯಕರನಿಗಾಗಿ ತನ್ನ ಎರಡು ಮಕ್ಕಳನ್ನೇ ಕೊಂದ ತಾಯಿ: ತಾಯಿ -ಪ್ರಿಯಕರನ ಬಂಧನ

ಭಾಸ್ಕರ ಪತ್ರಿಕೆ
0



ರಾಮನಗರಕಾಮಾತುರಾಣಾಂ  ನ ಭಯಂ...ನ ಲಜ್ಜ ಎಂಬ ಮಾತು ಸತ್ಯ, ಮದುವೆಯಾಗಿದ್ದ ಹೆಣ್ಣೊಂದು ತನ್ನ ಅಕ್ರಮ  ಸಂಬಂಧಕ್ಕೆ ಅಡ್ಡಿಯಾಗಿದ್ದಾರೆಂದು ತನ್ನ ಪ್ರಿಯಕರನೊಂದಿಗೆ ಸೇರಿ ತಾನೇ ಹೆತ್ತ ಮಕ್ಕಳನ್ನೇ ಹತ್ಯೆ ಮಾಡಿರುವ ದುರ್ಘಟನೆ ಐಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ, ಇದು ನಿಜಕ್ಕೂ ತಾಯಿ ಎಂಬ ಪದಕ್ಕೆ ಅಪಮಾನ, ಹತ್ಯೆಯಾದ ಮಕ್ಕಳು 3ವರ್ಷದ ಕಬಿಲಾ,ಹಾಗೂ 11 ತಿಂಗಳ ಮಗು ಕಬೀರನ್ ಎಂದು ಗುರುತಿಸಲಾಗಿದೆ. 


ಈ ಕೊಲೆ ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳಾದ ಸ್ವೀಟಿ (24), ಮನೆಕೆಲಸಗಾರ್ತಿ ಮತ್ತು ಆಕೆಯ ಪ್ರಿಯಕರ ಗ್ರೆಗೊರಿ ಫ್ರಾನ್ಸಿಸ್ (27)ನನ್ನು ಬಂಧಿಸಿದ್ದಾರೆ, ಸ್ವೀಟಿಯ ಮದುವೆ ಶಿವು ಇಂಬಾತನ ಜೊತೆಗೆ  ಆಗಿತ್ತು, ಆರೋಪಿ ಮಹಿಳೆ ಸ್ವೀಟಿಗೆ ಬೆಂಗಳೂರಿನ ಟ್ಯಾನಿ ರೋಡ್‌ನ  ಎಕೆ ಕಾಲೋನಿ ವಾಸಿ ಶಿವು ಜೊತೆ 4 ವರ್ಷಗಳ ಹಿಂದೆ ಮದುವೆಯಾಗಿತ್ತು. ಕಳೆದ ಜುಲೈ 30ರಂದು ಸ್ವೀಟಿ ಪತಿ ಶಿವುನನ್ನು ಬಿಟ್ಟು ಮಕ್ಕಳೊಂದಿಗೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಒಂದೂವರೇ  ತಿಂಗಳಾದ ಬಳಿಕ ಆಕೆ ಒಬ್ಬಳೆ ಮನೆಗೆ ಹಿಂತಿರುಗಿದಳು, ಕಥೆ ಹೇಳುತ್ತಾ, ಮಕ್ಕಳನ್ನು ಹಾಸ್ಟೆನಲ್ಲಿ ಇರಿಸಿದ್ದೀನಿ ಎಂದು ಹೇಳಿದ್ದಳು. ಮನೆಯಿಂದ ಹೋಗಿದ್ದೇಕೆಂದು ಪ್ರಶ್ನಿಸಿದಾಗ ಬ್ಯಾಂಕಿನಟ್ಟಿಲ್ಲ ಹಣ ಖರ್ಚು ಮಾಡಿದ್ದೇನೆ. 


ನೀವು ಏನಾದರೂ ಮಾಡುತ್ತೀರಿ ಎಂಬ ಭಯದಿಂದ ರಾಮನಗರಕ್ಕೆ ಹೋಗಿದ್ದೆ. ಇನ್ನು ಹೀಗೆ  ಮಾಡುವುದಿಲ್ಲ ಎಂದು ಹೇಳಿದ್ದಾಳೆ. ಬಳಿಕ ಶಿವು ಆ ಮಕ್ಕಳನ್ನು ಮನೆಗೆ ಕರೆತಂದಿದ್ದಾರೆ. ಈ ಮಧ್ಯೆ  ಸ್ವೀಟಿಯ ಬ್ಯಾಗ್‌ನಲ್ಲಿ ಜಾರ್ಜ್‌ ಪ್ರಾನ್ಸಿಸ್‌ ಎಂಬುವನ ಆಧಾರ್‌ ಕಾರ್ಡ್‌ ಸಿಕ್ಕಿದ್ದು, ಆಧಾರ್‌ ನಂಬರ್‌ಗೆ ಕರೆ ಮಾಡಿದಾಗ ಆತ ಸ್ವೀಟಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದಾನೆ. ಮತ್ತೇ ಸ್ವೀಟಿ ಆಗಸ್ಟ್ 19 ರಂದು ಮಕ್ಕಳ ಸಮೇತ  ಮನೆಯಿಂದ ಓಡಿಹೋಗಿದ್ದುಈ ಸಂಬಂಧ ಬೆಂಗಳೂರಿನ ಡಿ.ಜೆ.ಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.!ಕಾಮಕ್ಕೆ ಕಣ್ಣಿಲ್ಲ, ಹಡೆದ ಮಕ್ಕಳೂ ಹೆತ್ತತಾಯಿ ಕಣ್ಣಿಗೆ ಕಾಣಲಿಲ್ಲ ಎಂಬುದೇ ಇಲ್ಲಿ ದುರಂತ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*