ಕಲ್ವತರು ನಾಡಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ 100ನೇ ವರ್ಷದ ಪಥಸಂಚಲನ

ಭಾಸ್ಕರ ಪತ್ರಿಕೆ
0

 




ತಿಪಟೂರು: ನಗರದಲ್ಲಿ ವಿಜಯದಶಮಿ ದಸರಾ ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು. ಗ್ರಾಮದೇವತೆ ಕೆಂಪಮ್ಮ ದೇವಿ ಪ್ರಾರಂಭವಾದದೇವಾಸ್ಥಾನದಿಂದ ಪಥಸಂಚಲನ ನಗರದ ಪ್ರಮುಖ ಬೀದಿಗಳಾದ ಕೋಟೆ, ರಾಮಮಂದಿರ ರಸ್ತೆ, ಕನ್ನಿಕಾ ಪರಮೇಶ್ವರಿ ದೇವಾಸ್ಥಾನದ ರಸ್ತೆ, ಹೊಸಪೇಟೆ ರಸ್ತೆ, ಕಾರೋನೇಷನ್ ರಸ್ತೆ ಮೂಲಕ ರೈಲ್ವೆ ಸ್ಟೇಷನ್‌ ರಸ್ತೆ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮಾರೋಪ ಸಮಾರಂಭ ಮೂಲಕ ಮುಕ್ತಾಯಗೊಂಡಿತು.ಸಮಾರಂಭದಲ್ಲಿ ಮೂಲತಃ ಬೆಂಗಳೂರಿನ ಕಳೆದ ೨೫ ವರ್ಷದಿಂದ ಪ್ರಚಾರಕರು ಧರ್ಮ ಜಾಗರಣಾ, ವಿಶ್ವ ಹಿಂದೂ ಪರಿಷತ್ ನಲ್ಲಿ ಜವಾಬ್ಧಾರಿ ನಿರ್ವಹಿಸಿ ಪ್ರಸ್ತುತ ದೇವಾಲಯ ಸಂವರ್ಧನ ಸಮಿತಿಯ  ಕರ್ನಾಟಕ ರಾಜ್ಯ ಸಂಯೋಜಕರು ಹಾಗೂ ದೇವಾಲಯ ಸಂರಕ್ಷಣಾ ಸಮಿತಿ ಪ್ರಾಂತಪ್ರಮುಖರಾದ ಮನೋಹರ್‌' ಮಠದ್‌ ಮಾತನಾಡಿ, ಮುಂದಿನ ದಿನಗಳಲ್ಲಿ ಜಲಸಮಸ್ಯೆ ಎದುರಾಗಲಿದೆ. ಅದನ್ನು ಉಳಿಸುವ ಅವಶ್ಯ ನಮ್ಮೆಲ್ಲರ ಮೇಲಿದೆ. ಅದನ್ನು ಉಳಿಸುವ ನಿಟ್ಟಿನಲ್ಲಿ ಜಾಗೃತರಾಗಿ, ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಬೇಕಾದ ಅನಿವಾರ್ಯವಿದೆ ಎಂದರು.ಸಂಘ ದೇಶದ 45 ದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿದೆ. ಯಾವುದೇ ಧರ್ಮದ ವಿರುದ್ಧ ಕೆಲಸ ಮಾಡುತ್ತಿಲ್ಲ. ಸಂಸ್ಕೃತಿ, ಕಲೆ ಉಳಿಸುವ ಕೆಲಸ ಮಾಡಲಿದೆ ಎಂದರು. ಜಿಲ್ಲಾ ಕಾರ್ಯವಾಹ ರವೀಂದ್ರ ತೆಗ್ಗಿನಮನಿ, ಮನೋಹರ್ ರಂಗಾಪುರ, ಡಾ.ಶ್ರೀಧರ್, ಲೋಕೇಶ್ವರ, ಪ್ರಸನ್ನ- ಕುಮಾರ್, ತರಕಾರಿ ಗಂಗಾಧರ್, ಹಿರಿಯ ಸ್ವಯಂ ಸೇವಕ ಡೈರಿ ಭಾಸ್ಕರ್, ಉಮೇಶ್, ಗಿರೀಶ್, ಶ್ರೀಕಂಠ, ಗಾಡಿಮಂಜಣ್ಣ ಸೇರಿದಂತೆ ನೂರಕ್ಕೂ ಹೆಚ್ಚು ಫೋಷ್ ಸಹಿತ ಗಣವೇಷಧಾರಿ ಸ್ವಯಂಸೇವಕರು ಭಾಗವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*