ಡಾ. ನಾ. ಸೋಮೇಶ್ವರಗೆ ಸಾಹಿತ್ಯ ಕಲ್ಪತರು ಪ್ರಶಸ್ತಿ

ಭಾಸ್ಕರ ಪತ್ರಿಕೆ
0

 





ತಿಪಟೂರು: ಬಯಲುಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘ 2024ರ 'ಸಾಹಿತ್ಯ ಕಲ್ಪತರು' ಪ್ರಶಸ್ತಿಗೆ ಲೇಖಕ, 'ಥಟ್ ಅಂತ ಹೇಳಿ' ಖ್ಯಾತಿಯ ಡಾ. ನಾ. ಸೋಮೇಶ್ವರ ಅವರನ್ನು ಆಯ್ಕೆ ಮಾಡಿದೆ. ನ.9ರಂದು ತಿಪಟೂರು ನಗರದ ಆಸ್ಥಾನ ಮಂಟಪದಲ್ಲಿ ಸತ್ಯಗಣಪತಿ ನಡೆಯಲಿರುವ ಸಂಘದ 23ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಡಾ.ನಾ. ಸೋಮೇಶ್ವರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘ ಪ್ರತಿವರ್ಷ ಕನ್ನಡ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಸೇವೆಸಲ್ಲಿಸುತ್ತಿರುವವರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿದೆ. ಪ್ರಶಸ್ತಿ 10,000 ರೂ ನಗದು ಹಾಗೂ ಫಲಕವನ್ನು ಒಳಗೊಂಡಿದೆ.

ವಿಮರ್ಶಕ ಎಚ್‌.ಎಸ್‌. ಸತ್ಯನಾರಾಯಣ, ಸಾಹಿತಿ ತುರುವೇಕೆರೆ ಪ್ರಸಾದ್, ಚಿಂತಕ ಉಜ್ಜಜ್ಜಿ ರಾಜಣ್ಣ, ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ, ಶಿಕ್ಷಕ ಪಟ್ಟಾಭಿರಾಮ ಹಾಗೂ ಪ್ರಾಧ್ಯಾಪಕ ಎಲ್.ಎಂ. ವೆಂಕಟೇಶ್ ನೇತೃತ್ವದ ಆಯ್ಕೆ ಸಮಿತಿ ಡಾ. ನಾ.ಸೋಮೇಶ್ವರ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎನ್, ಭಾನು ಪ್ರಶಾಂತ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*