ತಿಪಟೂರು: ಹಾಸನ ವೃತ್ತದಿಂದ ಅರಸೀಕೆರೆ ಕಡೆಗೆ ಹೋಗುವ ಮುಖ್ಯ ರಸ್ತೆ NH26ರ ಎರಡು ಬದಿಗಳಲ್ಲಿ ಕಸದ ರಾಶಿ ನಾಮಫಲಕಗಳು ರಸ್ತೆ ಬದಿ ನಿಂತಿರುವ ನೀರಿನಿಂದ ಓಡಾಡುವ ಪಾದಾಚಾರಿಗಳು ಓಡಾಡಲು ಸಾಧ್ಯವಾಗದೆ , ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ, ಎರಡು ಇಕ್ಕೆಲಗಳಲ್ಲಿರುವ ಅಂಗಡಿ ಮಾಲೀಕರುಗಳು ಇದರ ದುರ್ನಾಥವನ್ನು ಸಹಿಸಿಕೊಂಡು ಜೀವಿಸುವುದು, ಸರ್ವೇಸಾಮಾನ್ಯವಾಗಿದೆ ರಸ್ತೆ ಪಕ್ಕದಲ್ಲಿ ಓಡಾಡುವ ಸಾರ್ವಜನಿಕರು ಮಹಿಳೆಯರು ಮಕ್ಕಳು ಮತ್ತು ವಿದ್ಯಾರ್ಥಿಗಳು ವಿಧಿಯಿಲ್ಲದೆ ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ರಸ್ತೆ ಬದಿಯಲ್ಲಿ ನಿಲ್ಲುವಂತಹ ನೀರು ಚರಂಡಿಗೆ ಹೋಗದ ಕಾರಣ ಅಲ್ಲಲ್ಲೇ ನಿಂತು ದುರ್ನಾಥ ಬೀರುತ್ತಿದೆ ಇತ್ತ ಕಡೆ ಗಮನಹರಿಸದೆ ನಗರಸಭೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಇಲ್ಲಿಯೇ ಖ್ಯಾತ ಕಲ್ಪತರು ಇಂಜಿನಿಯರಿಂಗ್ ಇನ್ಸ್ಟಿಟ್ಯೂಟ್ ಇದೆ ಹಾಗಾಗಿ ಇದಕ್ಕೆ ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಗಮನಹರಿಸಬೇಕು.
ಹಾಸನ ವೃತ್ತದಿಂದ ಅರಸೀಕೆರೆ ಕಡೆಗೆ ಹೋಗುವ ಮುಖ್ಯ ರಸ್ತೆ NH26ರ ಎರಡು ಬದಿಗಳಲ್ಲಿ ಕಸದ ರಾಶಿ ನಾಮಫಲಕಗಳು ರಸ್ತೆ ಬದಿ ನಿಂತಿರುವ ನೀರು: ಕಣ್ಣು ಮುಚ್ಚಿ ಕುಳಿತಿರುವ ನಗರಸಭೆ ಅಧಿಕಾರಿಗಳು
ಅಕ್ಟೋಬರ್ 25, 2024
0
Tags

