ಮೈಸೂರು: ದಿನಾಂಕ 03/11/2024 ಭಾನುವಾರದಂದು ಬೆಳಿಗ್ಗೆ 9ರಂದು ಜಿಲ್ಲಾ ಸಾಹಿತ್ಯ ಭವನ ನಾಲ್ವಡಿ ಕೃಷ್ಣರಾಜ ಸಭಾಂಗಣದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಸಾಧನರೆಗೈದ ಸಾಧಕರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ವತಿಯಿಂದ "ಕನ್ನಡ ರಾಜ್ಯೋತ್ಸವ ಪ್ರಶಸ್ತಿ" ಪ್ರಧಾನ ಸಮಾರಂಭವನ್ನು ಅಧ್ಯಕ್ಷರಾದ ಡಾ|| ನಾಗರಾಜು ತಂಬ್ರಹಳ್ಳಿರವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದು, ಧಾರವಾಡದ ಆಯುರ್ವೇದ ಪಂಡಿತರು ಶ್ರೀ ಪರಮ ಪೂಜ್ಯ ಡಾ|| ಅವಧೂತ ಮಹರ್ಷಿ ಸಿದ್ಧಾರ್ಥ ಸ್ವಾಮೀಜಿಯವರ ಸಾನಿಧ್ಯದಲ್ಲಿ ಮುಖ್ಯ ಅಥಿಗಳಾದ ಶ್ರೀ ಡಾ|| ತ್ಯಾಗರಾಜು, ಶ್ರೀ ಲಯನ್ ಸುರೇಶ್ ಗೋಲ್ಡ್, ಶ್ರೀ ಡಾ|| ವೈ.ವೈ ಕೋಕನ್ನವರ್, ಶ್ರೀಮತಿ ಶುಭಾ ವಿಷ್ಣು ಸಭಾಹಿತ್, ಶ್ರೀಮತಿ ವರಲಕ್ಷ್ಮೀ. ಆರ್ ಹಾಗೂ ಶ್ರೀ ಮಡ್ಡಿಕೆರೆ ಗೋಪಾಲ್ ಇವರ ಘನ ಅಧ್ಯಕ್ಷತೆಯಲ್ಲಿ ದೀಪ ಹಚ್ಚಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ಶ್ರೀ ಗೋವಿಂದ ಕಾಡಪ್ಪ ಮೇಲಗೇರಿ ನಡೆಸಿಕೊಟ್ಟರು. ಭರತನಾಟ್ಯವನ್ನು ಕು|| ಸಿಂಧು. ಆರ್ ನಡೆಸಿಕೊಟ್ಟರು ನಂತರ ಹಲವಾರು ಕ್ಷೇತ್ರಗಳಲ್ಲಿ ಸಾಧನರೆಗೈದ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ತಿಪಟೂರು ತಾಲೂಕಿನ ಸಾಧಕರುಗಳಾದ ಭಾಸ್ಕರ ಪತ್ರಿಕೆಯ ಪ್ರಧಾನ ಸಂಪಾದಕರಾದ ಹಿರಿಯ ಪತ್ರಕರ್ತ ಡಾ|| ಭಾಸ್ಕರ್, ರೈತಕವಿ ಡಾ|| ಪಿ. ಶಂಕರಪ್ಪ ಬಳ್ಳೇಕಟ್ಟೆ, ಭಾಸ್ಕರ ಟಿವಿ ಯೂಟ್ಯೂಬ್ ವಾಹಿನಿಯ ಸುದ್ದಿ ವಾಚಕರಾದ ಶ್ರೀಮತಿ ಶುಭ ವಿಶ್ವಕರ್ಮ ಹಾಗೂ ಹವ್ಯಾಸಿ ಕವಿಗಳಾದ ಶ್ರೀಮತಿ ಗೀತಾ ಭಾರತಿ ಮತಿಘಟ್ಟ ಇನ್ನೂ ಹಲವಾರು ಸಾಧಕರುಗಳಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ವತಿಯಿಂದ "ಕನ್ನಡ ರಾಜ್ಯೋತ್ಸವ ಪ್ರಶಸ್ತಿ" ನೀಡಿ ಗೌರವಿಸಲಾಯಿತು. ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು, ಪ್ರಾರ್ಥನೆ ಶ್ರೀಮತಿ ಅಶ್ವಿನಿ ನಾಗೇಂದ್ರ ಅವರಿಂದ ನಿರೂಪಣೆ ಕು|| ವೈಶಾಲಿ. ಎಸ್, ಸ್ವಾಗತ& ವಂದನಾರ್ಪಣೆ ಶ್ರೀ ಹನುಮೇಶ್ ಮರಡಿ ಅವರಿಂದ ನಡೆಯಿತು.



