ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆಯ ವತಿಯಿಂದ, ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮತ್ತು ಹೆಮ್ಮೆಯ ಕರ್ನಾಟಕ ರತ್ನ ಪ್ರಶಸ್ತಿ ವಿತರಣಾ ಸಮಾರಂಭವನ್ನು ನವೆಂಬರ್ 17 ಭಾನುವಾರ ಬೆಳಿಗ್ಗೆ
ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಅಡಿಟೋರಿಯಂ ನಂ 39 ಶಾಂತಿ ಗೃಹ ಪ್ಯಾಲೇಸ್ ರಸ್ತೆ, ಮಹಾರಾಣಿ ಕಾಲೇಜ್ ಬಳಿ ಆಯೋಜಿಸಲಾಗಿದ್ದು, ಈ ಸಮಾರಂಭಕ್ಕೆ ಗಣ್ಯಾತಿ ಗಣ್ಯರು ಹಾಗೂ ಸಿನಿಮಾ ನಟ- ನಟಿಯರು ಆಗಮಿಸುವರು, ಕಾರ್ಯಕ್ರಮದಲ್ಲಿ ಸಾಮೂಹಿಕ ನೃತ್ಯ ಪ್ರದರ್ಶನ, ಸೌಂದರ್ಯ ಪ್ರದರ್ಶನ, ಚಲನಚಿತ್ರ ನೃತ್ಯ, ಅರೆ ಶಾಸ್ತ್ರಿಯ ನೃತ್ಯ, ಜನಪದ ನೃತ್ಯ, ಪಾಶ್ಚಾತ್ಯ ನೃತ್ಯ ಹಾಗೂ ವಾದ್ಯ ಸಂಗೀತ ಸೇರಿದಂತೆ ಸ್ಪರ್ದೆಗಳನ್ನು ಏರ್ಪಡಿಸಲಾಗಿದ್ದು, ಈ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲು ಖ್ಯಾತ ನಟಿ
ಪ್ರೇಮ ಎನ್. ಸಿ ಆಗಮಿಸಲಿದ್ದಾರೆ.
ಈ ಸ್ಪರ್ಧೆಗಳ ತೀರ್ಪುಗಾರರಾಗಿ ಶ್ರೀಮತಿ ರೂಪ ಆನಂದ್ ಹಾಗೂ ಡಿ. ವಿ ಶ್ರೀನಿವಾಸನ್ ಆಗಮಿಸಲಿದ್ದಾರೆ.
ಕಾರ್ಯಕ್ರಮದ ಆಯೋಜಕರು ಡಾ. ಹುಸೇನ್ ಕೆರೂರ್, ಸಿ ಇ ಓ, ಎಂ. ಎಂ ಭಾರತ್ ಟಿವಿ ನಿರ್ದೇಶಕರು ಮತ್ತು ನಿರ್ಮಾಪಕರು ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತರು, ಶ್ರೀಮತಿ ಜಿ. ಪ್ರಭಾವತಿ ನಿರ್ದೇಶಕರು ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವರು ಈ ಕೆಳಕಂಡ ಟೆಲಿಫೋನ್ ಸಂಖ್ಯೆ:
9611231258, 8073338349 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. (ಮೊದಲು ಬಂದವರಿಗೆ ಆದ್ಯತೆ)
ಆಸಕ್ತಿ ಉಳ್ಳವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.