ಧಾರವಾಡ: ತಡರಾತ್ರಿ ನಗರದ ಆರ್.ಎನ್.ಶೆಟ್ಟಿ ಸ್ಟೇಡಿಯಂ ಬಳಿ ಅಭಿಷೇಕ್ ಬಡ್ಡಿಮನಿ ಎಂಬ ಫೈನಾನ್ಸರ್ ರಿವಾಲ್ವರ್‌ನಿಂದ ಗುಂಡು ಹಾರಿಸಿ ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಭೀಷೇಕ್ ಬಡ್ಡಿಮನಿ, ಸಂಗಮ ಸರ್ಕಲ್‌ನಲ್ಲಿ ಫೈನಾನ್ಸ್ ನಡೆಸುತ್ತಿದ್ದ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ, ಆತ ರಾತ್ರಿ ತನ್ನ ಮನೆಗೆ ಹೋಗುವ ಸಮಯದಲ್ಲಿ ತನ್ನ ದ್ವಿಚಕ್ರ ವಾಹನಕ್ಕೆ ಕಾರ್ ಟಚ್ ಆಗಿದೆ ಎಂದು ತನ್ನ ಬಳಿಯಿದ್ದ ರಿವಾಲ್ವರ್‌ನಿಂದ ಗುಂಡು ಹಾರಿಸಿ, ಭಯದಲ್ಲಿ ತನ್ನ ದ್ವಿಚಕ್ರ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.
| ಅರುಣ್ ಬಡ್ಡಿಮನಿ |
ಈ ಪ್ರಕರಣ ನಗರದ ಆರ್.ಎನ್.ಶೆಟ್ಟಿ ಸ್ಟೇಡಿಯಂ ಹತ್ತಿರ ನಡೆದಿದ್ದು, ಪೊಲೀಸರು ಇದರ ಬಗ್ಗೆ ತೀವ್ರ ತನಿಖೆ ಆರಂಭಿಸಿದ್ದಾರೆ, ಆ ಕಾರಿನಲ್ಲಿ ಮೂವರು ಇದ್ದರೆಂಬ ಮಾಹಿತಿಯಿದ್ದು, ಅವರು ಸಿವಿಲ್ ಆಸ್ಪತ್ರೆಗೆ ತೆರಳಿ ಅಲ್ಲಿಂದ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ, ಅಭಿಷೇಕ್ ಬಡ್ಡಿಮನಿ ಎಂಬ ಫೈನಾನ್ಸರ್ ತಡರಾತ್ರಿ ಗುಂಡು ಹಾರಿಸಿದ್ದು ಏಕೆ ಎಂಬುದು ಪೊಲೀಸರ ತನಿಖೆಯಿಂದ ಹೊರ ಬರಬೇಕಾಗಿದೆ.
