ದಾವಣಗೆರೆ: ವಿಶ್ವಚೇತನ ಶಾಲೆಯ ನಿರ್ದೇಶಕಿಯಾಗಿರುವ ವಿಜಯಲಕ್ಷ್ಮೀ ಎಂಬುವರಿಗೆ 10ಕೋಟಿ ವಂಚಿಸಲಾಗಿದ್ದು, ಗೋಲ್ಡ್ ಸ್ನ್ಯಾಚ್ ಎಂಬ ಕಂಪನಿಯಿಂದ ಈ ವಂಚನೆ ಆಗಿದೆ, ಈ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಒಳ್ಳೆ ಲಾಭ ಬರುತ್ತದೆ ಎಂದು ವಿಜಯಲಕ್ಷ್ಮೀ ಅವರಿಗೆ ಉಮೇಶ್ ಎಂಬಾತ ಹೇಳಿದ್ದರು, ಉಮೇಶನ ಮಾತು ನಂಬಿ ವಿಜಯಲಕ್ಷ್ಮೀ ಜೂನ್ ತಿಂಗಳಲ್ಲಿ 10 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು.
ಆ 10ಕೋಟಿ ಹಣ 23 ಕೋಟಿ ಆಗಿದೆ ಎಂದು ತೋರಿಸಿದಾಗ ಹಣ ಡ್ರಾ ಮಾಡಲು ವಿಜಯಲಕ್ಷ್ಮೀ ಹೋಗುತ್ತಾರೆ. ಈ ವೇಳೆ ಹಣವನ್ನು ಡ್ರಾ ಮಾಡಲು ಬರುವುದಿಲ್ಲ, ನೀವು ಮತ್ತಷ್ಟು ಹೂಡಿಕೆ ಮಾಡಬೇಕು ಎಂದು ಕಂಪನಿಯವರು ಹೇಳಿದಾಗ ವಿಜಯಲಕ್ಷ್ಮೀಗೆ ತಾವು ಮೋಸ ಹೋಗಿರುವುದು ಅರಿವಾಗಿದೆ
ಈಗ ವಿಜಯಲಕ್ಷ್ಮೀ ಅವರಿಗೆ ಹೂಡಿಕೆ ಬಗ್ಗೆ ವಿವರಿಸಿದ ಸಾಕ್ಷಿ ಹಾಗೂ ಅಮಾನ್ ಎಂಬುವವರ ವಿರುದ್ಧ ದಾವಣಗೆರೆ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಂಚನೆ ಹಣ 10 ಕೋಟಿ ರೂಪಾಯಿ ಆಗಿರುವುದರಿಂದ ಸದರಿ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.

