ಗಂಗಾವತಿ: ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕ ಮಹೇಶ್ ಎಚ್ 1ಲಕ್ಷ ಲಂಚದ ಹಣದೊಂದಿಗೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕಾರಟಗಿ ತಾಲೂಕಿನ ತಿಮ್ಮಾಪೂರ ಗ್ರಾಮದ ಪಂಚಾಕ್ಷರಿ ವೀರನಗೌಡ ಎಂಬುವರು, ತೋಟಗಾರಿಕೆ ಇಲಾಖೆ ಯೋಜನೆಯ ಹನಿ ನೀರಾವರಿ ಸೌಲಭ್ಯದಡಿ ಅರ್ಜಿ ಸಲ್ಲಿಸಿದ್ದರು, ಅದಕ್ಕೆ ಹಣ ಬಿಡುಗಡೆಗಾಗಿ ಕೋರಿದ್ದರು, ಎಲ್ಲ ಸರಿ ಇದ್ದರೂ ಸಹ ಲಂಚಕ್ಕೆ ಬೇಡಿಕೆ ಇತ್ತು, ಇದಕ್ಕೆ 1ಲಕ್ಷ ಲಂಚಬೇಡಿಕೆ ಇಟ್ಟ ಆ ಅಧಿಕಾರಿ, ಕೊನೆಗೆ ಇದಕ್ಕೆಲ್ಲ ಮದ್ದು ಎಂಬಂತೆ ಸೋಮವಾರ ಮಹೇಶ್. ಎಚ್ ರೆಡ್‌ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದು ಜೈಲು ಪಾಲಾಗಿದ್ದಾರೆ, ಕೊಪ್ಪಳ ಲೋಕಾಯುಕ್ತ ಇನ್ಸಪೆಕ್ಟರ್ ವಿಜಯ್‌ಕುಮಾರ್ & ತಂಡದ ನೇತೃತ್ವದಲ್ಲಿ ಈ ದಾಳಿ ನಡೆಸಿದ್ದಾರೆ.
