ತಿಪಟೂರು: ನಗರದ ಕಲ್ಪತರು ಸಭಾಂಗಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕರ್ನಾಟಕ ರಾಜ್ಯೋತ್ಸವ, ಮಕ್ಕಳ ದಿನಾಚರಣೆ ಹಾಗೂ ತಾಲ್ಲೂಕು ಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಶನಿವಾರ ನಡೆಯಿತು. ನಗರಸಭೆ ವೃತ್ತದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ವೀರಗಾಸೆ, ಈಶ್ವರ ಕುಣಿತ, ಕೋಲಾಟ ಮೊದಲಾದ ಜನಪದ ತಂಡಗಳ ಮೆರವಣಿಗೆಯಲ್ಲಿ ತೆರದ ವಾಹನದಲ್ಲಿ ಸಮ್ಮೇಳನದ ಅಧ್ಯಕ್ಷರು ಹಾಗೂ ಶಾಸಕರನ್ನು ವೇದಿಕೆಗೆ ಕರೆತರಲಾಯಿತು.
ಸಮ್ಮೇಳನಾಧ್ಯಕ್ಷೆ ಕು. ಚರಿತ ಮಾತನಾಡಿ, ಸರ್ಕಾರಿ ಶಾಲೆಗಳಿಗೂ ಕನ್ನಡ ಭಾಷೆ ಉಳಿವಿಗೂ ಅವಿನಾಭಾವ ಸಂಬಂಧವಿದೆ. ಸದ್ಯದ ಸರ್ಕಾರಿ ಶಾಲೆಯ ಸ್ಥಿತಿಗತಿಗಳ ಬಗ್ಗೆ ಯೋಚಿಸಿದರೆ ಕನ್ನಡ ಭಾಷೆಯ ರಥ ಎತ್ತ ಸಾಗಿದೆ ಎಂಬುದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ, ನಾಡು ನುಡಿಯ ರಕ್ಷಣೆಗಾಗಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಗಳು ಅತ್ಯಂತ ಮಹತ್ವ ಪಡೆದಿದೆ. ಇಲ್ಲಿ ನಡೆಯುವ ಚಿಂತನ ಮಂಥನಗಳು, ಕೈಗೊಳ್ಳುವ ತೀರ್ಮಾನಗಳು ಕನ್ನಡಿಗರ ಮನಸ್ಸಿನಲ್ಲಿ ಪ್ರೇರಣಾದಾಯಕ ಶಕ್ತಿಯಾಗಿದೆ ಎಂದರು.ವಿಚಾರ ಗೋಷ್ಠಿಯ ಅಧ್ಯಕ್ಷತೆಯನ್ನು ನೊಣವಿನಕೆರೆ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಮನುಜ ವಹಿಸಿದ್ದರು. ಗೋಷ್ಠಿಯಲ್ಲಿ ನಿತ್ಯಶ್ರೀ- 'ನನ್ನ ನೆಚ್ಚಿನ ಸಾಹಿತಿ', ಪ್ರಜ್ಞಾ- 'ಓದುವ ಹವ್ಯಾಸ ರೂಢಿಸಲು ಇರುವ ಅವಕಾಶಗಳ- ತ್ತ ಒಂದು ನೋಟ,' ನಿತ್ಯ- 'ಕನ್ನಡದ ಶಿಶು ಸಾಹಿತಿಗಳು', ಯಶಸ್ವಿನಿ- 'ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಸಮೂಹ ಮಾಧ್ಯಮದ ಪಾತ್ರ ಪ್ರಬಂಧ ಮಂಡನೆ ಮಾಡಿದರು.
ಮಕ್ಕಳ ಕವಿಗೋಷ್ಠಿ ಅಧ್ಯಕ್ಷತೆಯ ನ್ನು ಕಲ್ಪತರು ಸೆಂಟ್ರಲ್ ಶಾಲೆಯ ವರ್ಷ ವಹಿಸಿದ್ದು, ಗೋಷ್ಠಿಯಲ್ಲಿ ಪೂರ್ಣಿಮಾ 'ಭಾರತ ಮಾತೆ ಕುಡಿ', ಅಭಿಪ್ರಶಾಂತ್ 'ಕ್ಷಣ ಕ್ಷಣಕ್ಕೂ ಖುಷಿ ನೀಡುವ ಶಿಕ್ಷಣ' , ಚಾರಿಕ- 'ಇದು ನನ್ನ ಶಾಲೆ ಸರ್ಕಾರಿ ಶಾಲೆ', ಜನನಿ- 'ಕವಿಯು ಪ್ರತಿರೂಪದಲ್ಲಿ ಮಹಾತ್ಮರು, ನೇಹಾ- 'ಆಹಾರ-ವಿಹಾ- ರದಲ್ಲಿ ನಾವು' ಕವನ ವಾಚಿಸಿದರು.
ಶಾಸಕ ಕೆ.ಷಡಕ್ಷರಿ ಮಾತನಾಡಿ, 'ಕನ್ನಡ ಭಾಷೆ, ನಾಡು, ನುಡಿ, ಸಂಸ್ಕೃತಿ ನಶಿಸುತ್ತಿದೆ. ಈ ರೀತಿಯ ಸಮ್ಮೇಳನಗಳು ಮಕ್ಕಳಲ್ಲಿ ಅರಿವು ಮೂಡಿಸಲು ಸಹಕಾರಿ. ನಮ್ಮ ತಾಲ್ಲೂಕು ನಾಡಿಗೆ ಬಹಳಷ್ಟು ಸಾಹಿತಿಗಳು ಹಾಗೂ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ ಎಂದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಅಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ, ಮಾತನಾಡಿ, ಕನ್ನಡವನ್ನು ಬಳಸುತ್ತಾ ಹೋದರೆ ಅದು ತಾನಾಗಿಯೇ ಉಳಿಯುತ್ತದೆ. 25-30 ವರ್ಷಗಳ ಹಿಂದೆ ಮೂಲಸೌಕರ್ಯದ ಕೊರತೆ
ಇತ್ತು. ಬಡತನ ತಾಂಡವವಾಡುತ್ತಿತ್ತು, ಆದರೆ ಇಂದು ಅಭಿವೃದ್ಧಿ ಇದೆ. ಮೂಲ- ಸೌಕರ್ಯಗಳಿವೆ. ಆದರೆ ಯಾರಿಗೂ ನೆಮ್ಮದಿ ಎಂಬುದಿಲ್ಲ ಎಂದು ಅಭಿಪ್ರಾ ಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜಪ್ಪ ಮಾತನಾಡಿ, ಮಕ್ಕಳ ಸಾಹಿತ್ಯ ಸಮ್ಮೇಳನದ ಮೂಲಕ ಮಕ್ಕಳಿಗಾಗಿಯೇ ಒಂದು ವೇದಿಕೆ ನೀಡಿದ್ದೇವೆ. ಇಲ್ಲಿ ಮಕ್ಕಳಲ್ಲಿ ಅಡಗಿರುವ ಬಹುಮುಖ ಪ್ರತಿಭೆಗಳ ಅನಾವರಣವಾಗುತ್ತದೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಯಮುನಾ, ತಹಶೀಲ್ದಾರ್ ಪವನ್‌ಕುಮಾರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಯ್ಯ, ಆಯುಕ್ತ ವಿಶ್ವೇಶ್ವರಯ್ಯ ಬದರಗಡೆ, ಕಸಾಪ ಪದಾಧಿಕಾರಿಗಳಾದ ಎಚ್.ಎಸ್.ಮಂಜಪ್ಪ, ಎಸ್.ಶಂಕರಪ್ಪ, ಎಚ್.ಜೆ.ದಿವಾಕರ್, ಸೋಮಶೇಖರ್, ಪ್ರಾಂಶುಪಾಲ ಎಂ.ಡಿ. ಶಿವಕುಮಾರ್, ಮಕ್ಕಳ ಸಾಹಿತಿ ನಾಗರಾಜಶೆಟ್ಟಿ ಶಾರದಮ್ಮ, ಉಪಸ್ಥಿತರಿದ್ದರು.
ನಗರಸಭೆ ಅಧ್ಯಕ್ಷೆ ಯಮುನಾ, ತಹಶೀಲ್ದಾರ್ ಪವನ್‌ಕುಮಾರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಯ್ಯ, ಆಯುಕ್ತ ವಿಶ್ವೇಶ್ವರಯ್ಯ ಬದರಗಡೆ, ಕಸಾಪ ಪದಾಧಿಕಾರಿಗಳಾದ ಎಚ್.ಎಸ್.ಮಂಜಪ್ಪ, ಎಸ್.ಶಂಕರಪ್ಪ, ಎಚ್.ಜೆ.ದಿವಾಕರ್, ಸೋಮಶೇಖರ್, ಪ್ರಾಂಶುಪಾಲ ಎಂ.ಡಿ. ಶಿವಕುಮಾರ್, ಮಕ್ಕಳ ಸಾಹಿತಿ ನಾಗರಾಜಶೆಟ್ಟಿ ಶಾರದಮ್ಮ, ಉಪಸ್ಥಿತರಿದ್ದರು.
