ಅವಳಿ ನಗರದಲ್ಲಿ ತಡರಾತ್ರಿ ಗುಂಡು ಹಾರಿಸಿದ ಪ್ರಕರಣ: ನಾಲ್ಕು ಜನ ಆರೋಪಿಗಳು ಪೋಲಿಸ್ ಕಸ್ಟಡಿಗೆ

ಭಾಸ್ಕರ ಪತ್ರಿಕೆ
0



ಧಾರವಾಡ
:
ಆರ್‌ಎನ್‌ ಶೆಟ್ಟಿ ಸ್ಟೇಡಿಯಂ ಬಳಿ ಮಧ್ಯರಾತ್ರಿ 1ಕ್ಕೆ ನಡೆದಿದ್ದ ಏಕಾಏಕಿ ಗುಂಡಿನ ದಾಳಿಯ ಬಗ್ಗೆ ಭಾಸ್ಕರ್ ಪತ್ರಿಕೆ ವರದಿ ಮಾಡಿತ್ತು, ಈ ಪ್ರಕರಣದಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು, ನಂತರ ಆರೋಪಿಗಳನ್ನು ಕಸ್ಟಡಿಗೆ ಕೇಳಿ ಪಡೆದರು, ಈಗ ನಾಲ್ಕು ಜನ ಆರೋಪಿಗಳು ಪೊಲೀಸರ ಕಸ್ಟಡಿಯಲ್ಲಿದ್ದಾರೆ.




ಏನಿತ್ತು ಪ್ರಕರಣದಲ್ಲಿ..?
ಸಂಗಮ್ ಟಾಕೀಸ್ ಬಳಿ ಫೈನಾನ್ಸ್ ನಡೆಸುತ್ತಿದ್ದ ಅಭಿಷೇಕ್ ಬಡ್ಡಿಮನಿ, ಏಕಾಏಕಿ ಎರಡು ಸುತ್ತು ಗುಂಡು ಹಾರಿಸಿ ಕೊಲೆ ಯತ್ನ ನಡೆಸಿದ್ದಾನೆಂದು ಒಂದರಲ್ಲಿ ಆದರೆ, ಮತ್ತೊಂದರಲ್ಲಿಯೂ ಇದೇ ಪ್ರಕರಣ, 3 ಆರೋಪಿಗಳಾದ ಪ್ರಜ್ವಲ್, ಗಣೇಶ ಹಾಗೂ ದಾನೇಶ ವಿರುದ್ಧವೂ ದಾಖಲಾಗಿದೆ. 
ಈ ಘಟನೆ ನಡೆದಿರುವುದು ಕುಡಿದ ಅಮಲಿನಲ್ಲೋ ಅಥವಾ ಬೇರೆ ಹಳೆಯ ದ್ವೇಷವು ಎಂಬುದನ್ನು ಅರಿಯಲು ಪೊಲೀಸರು ಈ ನಾಲ್ಕು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 
ಆರೋಪಿ ಪ್ರಜ್ವಲ್ ಬಿಜೆಪಿ ಮುಖಂಡ ಕಲ್ಮೇಶ್‌ ಹಾವೇರಿಪೇಟ ಅವರ ಪುತ್ರ ಎಂಬುದು ತಿಳಿಯು ಬಂದಿದ್ದು, ಇದೇ ಪ್ರಜ್ವಲ್ ಘಟನೆ ವೇಳೆ ಕಾರು ಚಲಾಯಿಸುತ್ತಿದ್ದ, ಈತ ದಾಳಿಯಿಂದ ಕೊಂಚ ಅಂತರದಲ್ಲಿ ಪಾರಾಗಿದ್ದಾನೆ ಎಂಬುದು ಬಲ್ಲಮೂಲಗಳಿಂದ ತಿಳಿದು ಬಂದಿದೆ. 
ಅಭಿಷೇಕ್ ಬಡ್ಡಿಮನಿ ವಿರುದ್ಧವಾಗಿ ಬಂಧನವಾಗಿರುವ ಮೂವರು ಆರೋಪಿಗಳು ಒಂದೇ ಜಿಮ್ ಗೆ ವ್ಯಾಯಾಮ ಮಾಡಲು ಹೋಗುತ್ತಿದ್ದರು, ಇವರುಗಳಿಗೂ ಮತ್ತು ಅಭಿಷೇಕ ಬಡ್ಡಿಮನಿಗೂ ಏನಾದರೂ ದ್ವೇಷ ಇತ್ತಾ...? ಎಂಬುದು ಪೊಲೀಸರ ತನಿಖೆ ಮೂಲಕ ಹೊರ ಬರಬೇಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*