ಭಾಸ್ಕರ ಪತ್ರಿಕೆ ಇಂಪ್ಯಾಕ್ಟ್:‌ ತಿಪಟೂರಿನಲ್ಲಿ ಟ್ರಾಫಿಕ್‌ ಸಿಗ್ನಲ್‌ ಗಳು ಚಾಲನೆಗೊಂಡಿವೆ

ಭಾಸ್ಕರ ಪತ್ರಿಕೆ
0


ತಿಪಟೂರು: ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ಬಗ್ಗೆ ಭಾಸ್ಕರ ಪತ್ರಿಕೆ ಬಿ.ಸಿ ನಾಗೇಶ್‌ ಅವರ ಅಧಿಕಾರದ ಅವಧಿಯಿಂದಲೂ ಸತತವಾಗಿ ವರದಿ ಮಾಡುತ್ತಾ ಬಂದಿದ್ದು, ಆಗ ಮಾಜಿ ಶಾಸಕ ಬಿ.ಸಿ ನಾಗೇಶ್‌ರವರ ಮುಂದಾಳತ್ವದಲ್ಲಿ ಟ್ರಾಫಿಕ್‌ ಸಿಗ್ನಲ್‌ಗಳು ಅಳವಡಿಕೆಯಾಗಿದ್ದರೂ ಕೂಡ ಚಾಲನೆಗೊಂಡಿರಲಿಲ್ಲ, ಇದರಿಂದ ಇದೇ ಬಿ.ಹೆಚ್‌ ರಸ್ತೆಯಲ್ಲಿ ಅಪಘಾತಗಳು ನಡೆದಿದ್ದವು, ಈ ವಿಷಯವಾಗಿ ಭಾಸ್ಕರ ಪತ್ರಿಕೆ ಹಲವಾರು ಬಾರಿ ವರದಿ ಮಾಡಿತ್ತು, ಅದು ನೂತನ ಶಾಸಕರ ಗಮನಕ್ಕೆ ಬರಲು 2ವರ್ಷ ಬೇಕಾಯಿತು, ನವೆಂಬರ್‌ 2ರಂದು ಇದು ಶಾಸಕ ಷಡಕ್ಷರಿ ಅವರ ಗಮನಕ್ಕೆ ಬಂದಿದ್ದು,  ನಗರಸಭೆಯ ಆವರಣದ ಟ್ರಾಫಿಕ್ ಸಿಗ್ನಲ್ ಸ್ವಿಚ್ ಆನ್ ಮಾಡುವ ಮೂಲಕ ಚಾಲನೆ ನೀಡಿದರು. ಪ್ರಾಯೋಗಿಕವಾಗಿ ಮೊದಲ ಮೂರು ದಿನಗಳು ಯಾವುದೇ ದಂಡ ಶುಲ್ಕ ವಿಧಿಸುವುದಿಲ್ಲ ನಂತರದ ದಿನಗಳಲ್ಲಿ ವಿಧಿಸಲಾಗುವುದು, ವಾಹನ ಸವಾರರು ನಿಯಮ ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ. 

ಭಾಸ್ಕರ ಪತ್ರಿಕೆಯ ಸತತ ಮೂರು ವರ್ಷಗಳ ವರದಿಯ ನಂತರ ಈ ಕಾರ್ಯ ಯಶಸ್ವಿಯಾಗಿದ್ದು, ಸ್ಥಳಿಯರು ಭಾಸ್ಕರ ಪತ್ರಿಕೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*