ತಿಪಟೂರು: ನಗರದ ಹಾಸನ ರಸ್ತೆ ಶಾರದ ನಗರ ರೈಲ್ವೆ ಮೇಲ್ಸೇತುವೆ ನಿರ್ಮಾಣಮಾಡಬೇಕು, ಎನ್ನುವ ಬಹುದಿನಗಳ ಬೇಡಿಕೆಗೆ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ನವರು 88.32ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ರೈಲ್ವೆ ಇಲಾಖೆ ಮಂಜೂರಾತಿ ನೀಡಲು ಯಶಸ್ವಿಯಾಗಿದ್ದಾರೆ.
ದಿನಾಂಕ 27.10.2024ರಂದು ಶ್ರೀ ವಿ. ಸೋಮಣ್ಣ, ಮಾನ್ಯ ಲೋಕಸಭಾ ಸಂಸದರು, ತುಮಕೂರು ಹಾಗೂ ರೇಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವರು, ಭಾರತ ಸರ್ಕಾರ ಇವರು ನಗರದಲ್ಲಿ ಭಾರತೀಯ ರೇಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳೊಂದಿಗೆ ಸಾರ್ವಜನಿಕ ಕುಂದು ಕೊರತೆ ಸಭೆ ನಡೆಸಿದ್ದರು.
ಈ ಸಂದರ್ಭದಲ್ಲಿ ಸಾರ್ವಜನಿಕರು ತಿಪಟೂರಿನ ಹೃದಯ ಭಾಗ ಶಾರದಾ ನಗರದಲ್ಲಿ ಮೇಲ್ಸೇತುವೆ (ಎಲ್.ಸಿ.86) ಮತ್ತು ಹೊನ್ನವಳ್ಳಿ ಮೇಲ್ಸೆತುವೆ (ಎಲ್.ಸಿ.88) ನಿರ್ಮಾಣ ಮಾಡಿಸಿಕೊಟ್ಟು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಕೇಂದ್ರ ಸಚಿವ ಸೋಮಣ್ಣನವರು ಸ್ಥಳದಲ್ಲಿ ರೇಲ್ವೆ ಅಧಿಕಾರಿಗಳಿಗೆ ಈ ಬಗ್ಗೆ ಕ್ರಮ ಜರುಗಿಸಲು ಆದೇಶ ನೀಡಿದ್ದರು. ಇದಕ್ಕೆ ಸ್ಪಂದಿಸಿ, ರೇಲ್ವೆ ಬೋರ್ಡ್ ತಿಪಟೂರಿನ ಶಾರದಾ ನಗರದಲ್ಲಿ (ಎಲ್.ಸಿ. 86) ಮೇಲ್ಸೇತುವೆಯನ್ನು ಒಟ್ಟು ರೂ.89.32 ಕೋಟಿ ವೆಚ್ಚದಲ್ಲಿ ಮಂಜೂರು ಮಾಡಿ ಆದೇಶಿಸಿದೆ.
ವರದಿ: ಡಾ. ಭಾಸ್ಕರ್


