ಬೆಂಗಳೂರು: ನಗರದಲ್ಲಿ ಲೋಕಾಯುಕ್ತ ಅಧಿಕಾರಿಗಳು ಒಂದು ಮನೆಯ ರೇಡ್ ಮಾಡಲು ಸರ್ಕಸ್ ಮಾಡಿದ್ದಾರೆ, ಮನೆಯ ಒಳಗೇ ಇದ್ದು 4ಗಂಟೆ ಬಾಗಿಲನ್ನು ತೆರೆಯದೇ ಲೋಕಾಯುಕ್ತ ಅಧಿಕಾರಿಗಳಿಗೆ DHO ಸುನೀಲ್‌ಕುಮಾರ್ ಆಟ ಆಡಿಸಿದ್ದಾರೆ.
ಹೌದು DHO ಸುನೀಲ್ ಕುಮಾರ್ ಬಸವೇಶ್ವರನಗರದ ನಾಲ್ಕು ಅಂತಸ್ತಿನ ಮನೆಯಲ್ಲಿ ವಾಸವಿದ್ದು ನಿನ್ನೆ ಬೆಳಗ್ಗೆ 6 ಗಂಟೆ ಸುಮಾರಿಗೆ ಲೋಕಾಯುಕ್ತ ಅಧಿಕಾರಿಗಳ ತಂಡ ದಿಢೀರ್ ದಾಳಿ ಮಾಡಲು ಬಂದು ತ್ರಿಪ್ಲೆಕ್ಸ್ ಮನೆಯ ಕಾಲಿಂಗ್ ಬೆಲ್ ಒತ್ತಿಯೇ ಒತ್ತಿದ್ದಾರೆ, ಅದು ಲೋಕಾಯುಕ್ತ ರೇಡ್ ಎಂದು ಗೊತ್ತಾಗುತ್ತಿದ್ದಂತೆ DHO ಸುನೀಲ್ ಕುಮಾರ್ ಅವರು ಸತತ 4 ಗಂಟೆಗಳ ಕಾಲ ಮನೆಯ ಡೋರ್ ಓಪನ್ ಮಾಡಿಲ್ಲ.
4 ಗಂಟೆಗಳ ಕಾಲ ಕಾದು ಕೊನೆಗೆ 10:15ಕ್ಕೆ ಅಧಿಕಾರಿಗಳು, ಪೊಲೀಸರು ಪಕ್ಕದ ಮನೆಯ ಬಿಲ್ಡಿಂಗ್ ಏರಿ ಕಾಂಪೌಂಡ್ ಮೂಲಕ ಈ ಮನೆಗೆ ಹೋದರು, ಲಿಫ್ಟ್ ಮೂಲಕ ನೇರವಾಗಿ ಮನೆಯ ಹಾಲ್‌ಗೆ ಎಂಟ್ರಿ ಕೊಟ್ಟಿರುವ ಲೋಕಾಯುಕ್ತ ಅಧಿಕಾರಿಗಳು ಇಡೀ ಮನೆಯ ಶೋಧನೆ ನಡೆಸಿದ್ದಾರೆ. DHO ಸುನೀಲ್ ಕುಮಾರ್ ಅವರ ಈ ಮನೆಯಲ್ಲಿ ಸುಮಾರು 7 ಬೆಡ್ ರೂಂಗಳಿವೆ, ಲೋಕಾಯುಕ್ತ ಎಸ್ಪಿ ವಂಶಿಕೃಷ್ಣ, ಡಿವೈಎಸ್ಪಿ ಉಮಾದೇವಿ ತಂಡದಿಂದ ಸುನೀಲ್ ಕುಮಾರ್ ಮನೆಯ ಪರಿಶೀಲನೆ ನಡೆಸಲಾಗಿದೆ. ಮನೆಯ ಬೆಡ್ ರೂಂಗಳು, ಹಾಲ್, ಪಾರ್ಕಿಂಗ್ ಜಾಗ, ಕಾರುಗಳು ಅಷ್ಟೇ ಅಲ್ಲದೇ ಮನೆಯ ಸಂಪ್ ಒಳಗೂ ಇಳಿದು ಲೋಕಾಯುಕ್ತ ಅಧಿಕಾರಿಗಳು ತೀವ್ರ ತಪಾಸಣೆ ನಡೆಸಿದ್ದಾರೆ. ಇದರ ತನಿಖೆ ಇನ್ನೂ ನಡೆದಿದೆ.
| DHO ಸುನೀಲ್ ಕುಮಾರ್ ಮನೆಯಲ್ಲಿ ಸಿಕ್ಕ ನಗದು ಮತ್ತು ಚಿನ್ನ-ಬೆಳ್ಳಿ ವಸ್ತುಗಳು |
