ಡಾ. ಭಾಸ್ಕರ್‌ ನೇತೃತ್ವದಲ್ಲಿ ಹಿಂದೂ ಶೌರ್ಯ ದಿವಸ್‌ ಆಚರಣೆ

ಭಾಸ್ಕರ ಪತ್ರಿಕೆ
0


ತಿಪಟೂರು: ಹಿಂದುಗಳ ಆರಾಧ್ಯ ದೈವ ಭಗವಾನ್ ಶ್ರೀರಾಮ ಹುಟ್ಟಿದ ಜನ್ಮಭೂಮಿಯಾಗಿದ್ದ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿ, ಹಿಂದೂಗಳು ಒಗ್ಗೂಡಿದರೆ ಏನನ್ನಾದರೂ ಸಾಧಿಸಬಹುದು ಎಂದು ತೋರಿಸಿದ ಈ ದಿನವನ್ನು ಹಿಂದೂ ಶೌರ್ಯ ದಿವಸವನ್ನಾಗಿ ಆಚರಿಸುತ್ತಾ ಬಂದಿದ್ದೆವೆ, ಈಗಾಗಲೇ ಅಯೋಧ್ಯೆಯ ರಾಮಮಂದಿರ ಪೂರ್ಣಗೊಂಡಿದೆ, ಆದರೆ ಇದರ ಹಿಂದೆ ಎಷ್ಟು ಪ್ರಾಣ ಹೋಗಿವೆ, ಎಷ್ಟು ಸಂಕಷ್ಟಗಳು ಎದುರಾಗಿವೆ, ಇವನ್ನೆಲ್ಲ ಮೀರಿ ನಾವು ಹೇಗೆ ವಿಯಜದ ಪತಾಕೆ ಹಾರಿಸಿದೆವು ಎಂಬುದು ನಮ್ಮ ಮುಂದಿನ ಪೀಳಿಗೆಗೆ ಗೊತ್ತಾಗಬೇಕು ಎಂದರು, ಬಾಬ್ರಿ ಮಸೀದಿ ತೆರವುಗೊಳಿಸುವ ಮಹಾತ್ಕಾರ್ಯದಲ್ಲಿ ಅಂದು ಭಾಗವಹಿಸಿದ್ದ ಕಲ್ಪತರು ನಾಡಿನ ಭಾಸ್ಕರ ಪತ್ರಿಕೆಯ ಸಂಪಾದಕರು ಹಾಗೂ ಹಿರಿಯ ಪತ್ರಕರ್ತರಾದ ಡಾ.ಭಾಸ್ಕರ್ ಅವರು ತಮ್ಮ ಅಂದಿನ ಕಷ್ಟಕಾರ್ಪಣ್ಯಗಳ ಬಗ್ಗೆ ನೆನಪಿಸುತ್ತಾ ಹಿಂದೂ ಸಮಾಜ ಎಂದೆಂದೂ ಒಂದು ಒಗ್ಗಟ್ಟಾಗಿದ್ದರೆ ಏನಾದರೂ ಸಾಧಿಸುತ್ತೇವೆಂಬ ಛಲ ಹಿಂದುಗಳದ್ದು ಹಾಗಾಗಿ ಹಿಂದೂಗಳು ಇಂದು ಶೌರ್ಯ ದಿವಸ ಆಚರಿಸುತ್ತಿರುವುದು ಕಲ್ಪತರುನಾಡಿಗೆ ಹೆಮ್ಮೆಯ ಸಂಗತಿ ಎಂದು ತಮ್ಮ ಹೋರಾಟದ ದಿನಗಳನ್ನು ಮೆಲುಕು ಹಾಕಿದರು, ಇವರ ಜೊತೆಗೆ ನಿವೃತ ಎಲ್.ಐ.ಸಿ ಅಧಿಕಾರಿ ಜಯದೇವಪ್ಪ, ವಾಣಿಜ್ಯೋಧ್ಯಮಿ ಜನಾರ್ಧನ್‌, ಭಾಸ್ಕರ ಪತ್ರಿಕಾ ಬಳಗದ ಸದಸ್ಯರು ಮತ್ತು ಹಿತೈಷಿಗಳು ಸೇರಿ ಭಗವಾನ್ ಶ್ರೀರಾಮಚಂದ್ರ ಅವರಿಗೆ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*