ಅಯೋಧ್ಯೆ ಆಯ್ತು, ಇನ್ಮುಂದೆ ಬಂಗಾಳದಲ್ಲಿ ರಾಮಮಂದಿರ ನಿರ್ಮಾಣ: ಬಿಜೆಪಿ ಘೋಷಣೆ

ಭಾಸ್ಕರ ಪತ್ರಿಕೆ
0

ಪಶ್ಚಿಮ ಬಂಗಾಳದ ಬೆಹರಾಂಪುರದಲ್ಲಿ ರಾಮಮಂದಿರವನ್ನು ನಿರ್ಮಿಸುವುದಾಗಿ ಬಿಜೆಪಿ ಘೋಷಿಸಿದೆ. 2025 ಜನವರಿ 22ಕ್ಕೆ ರಾಮಮಂದಿರ ನಿರ್ಮಾಣದ ಆರಂಭ ಮಾಡುವುದಾಗಿ ಬಿಜೆಪಿ ಸ್ಪಷ್ಟಪಡಿಸಿದೆ. 2024 ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರವನ್ನು ಉದ್ಘಾಟಿಸಲಾಗಿತ್ತು.

ಮಂದಿರ ನಿರ್ಮಾಣಕ್ಕಾಗಿ ಸ್ಥಳವನ್ನು ನಿಗದಿಪಡಿಸಲಾಗಿದೆ ಮತ್ತು ಈ ಮಂದಿರ ನಿರ್ಮಾಣಕ್ಕಾಗಿ 10 ಕೋಟಿ ರೂಪಾಯಿ ಖರ್ಚು ತಗಲಬಹುದು ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಅಯೋಧ್ಯೆಯ ರಾಮ ಮಂದಿರದ ರೀತಿಯಲ್ಲಿಯೇ ಈ ಮಂದಿರವನ್ನು ನಿರ್ಮಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಇದಕ್ಕಿಂತ ಮೊದಲು ಟಿಎಂಸಿ ಶಾಸಕ ಹುಮಾಯೂನ್ ಕಬೀರ್ ಅವರು ಬಾಬರಿ ಮಸೀದಿಯ ರೀತಿಯಲ್ಲಿಯೇ ಬೆಳ್ದಂಗಾ ಪ್ರದೇಶದಲ್ಲಿ ಮಸೀದಿಯನ್ನು ಕಟ್ಟಲಾಗುವುದು ಎಂದು ಘೋಷಿಸಿದ್ದರು. ಈ ಘೋಷಣೆಯ ಬಳಿಕ ರಾಮಮಂದಿರ ನಿರ್ಮಾಣದ ಹೇಳಿಕೆ ಹೊರ ಬಿದ್ದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*