ಕೋಳಿ ಮಾರಾಟಗಾರನ ಮನೆಗೆ ರಾಷ್ಟ್ರೀಯ ತನಿಖಾ ದಳದಿಂದ ದಿಢೀರ್ ದಾಳಿ

ಭಾಸ್ಕರ ಪತ್ರಿಕೆ
0

ಬಿಹಾರದ ಸೀತಾಮಢಿ ಜಿಲ್ಲೆಯ ಮುಹಮ್ಮದ್ ಅಲೀಮ್ ಎಂಬ ಕೋಳಿ ಮಾರಾಟಗಾರನ ಮನೆಗೆ ರಾಷ್ಟ್ರೀಯ ತನಿಖಾ ದಳವು ದಿಢೀರನೇ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಬೆಳ್ಳಂಬೆಳಗ್ಗೆ ನಾಲ್ಕು ಗಂಟೆ 30 ನಿಮಿಷದ ವೇಳೆಗೆ ಎನ್ ಐ ಎ ಅಧಿಕಾರಿಗಳು ಮನೆಗೆ ದಾಳಿ ಇಟ್ಟಿದ್ದಾರೆ. ಈ ದಾಳಿಯಿಂದ ಮನೆಯ ಸದಸ್ಯರು ಬೆಕ್ಕಸ ಬೆರಗಾಗಿದ್ದಾರೆ.

ಎನ್ ಐ ಎ ತಂಡ ಅವರ ಮೊಬೈಲ್ ಅನ್ನು ಪಡಕೊಂಡದ್ದಲ್ಲದೆ ಅವರನ್ನು ಭಾಜಪತ್ತಿ ಪೊಲೀಸ್ ಠಾಣೆಗೆ ತನಿಖೆಗಾಗಿ ಕೊಂಡೊಯ್ದಿದೆ ಮತ್ತು ಐದು ಗಂಟೆಯ ಬಳಿಕ ಅವರನ್ನು ಬಿಡುಗಡೆ ಮಾಡಿದೆ ಎಂದು ತಿಳಿದು ಬಂದಿದೆ. ಆದರೆ ಮೊಬೈಲ್ ಫೋನನ್ನು ಅವರಿಗೆ ಹಿಂದಿರುಗಿಸಲಾಗಿಲ್ಲ.
ಅಲೀಂ ವಿಷಯದಲ್ಲಿ ನಮಗೆ ಯಾವುದೇ ಶಂಖೆ ಇಲ್ಲ ಮತ್ತು ಯಾವುದೇ ಶಂಕಿತ ಚಟುವಟಿಕೆಯಲ್ಲಿ ಅವರು ಭಾಗಿಯಾಗಿರುವುದನ್ನು ನಾವು ಕಂಡಿಲ್ಲ ಎಂದು ಅಧಿಕಾರಿಗಳಿಗೆ ನೆರೆಕೆರೆಯವರು ಉತ್ತರ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*