ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ- ನಾಳೆ ನಗರದಲ್ಲಿ ಪ್ರತಿಭಟನೆ

ಭಾಸ್ಕರ ಪತ್ರಿಕೆ
0

 


ತಿಪಟೂರು: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯವನ್ನು ಹಾಗೂ ಹಿಂದೂ ದೇವಾಲಯಗಳ ಮತ್ತು ದೇವ ದೇವತೆಗಳ ವಿಗ್ರಹ ಭಂಜನೆಯನ್ನು ಅಲ್ಲಿನ ಮತಾಂಧ ಮುಸ್ಲಿಂ ಸಮಾಜದ ದೌರ್ಜನ್ಯ ಮತ್ತು ಅತ್ಯಾಚಾರಗಳನ್ನು ಖಂಡಿಸಿ ಹಿಂದೂ ಹಿತರಕ್ಷಣಾ ವೇದಿಕೆ ವತಿಯಿಂದ ನಾಳೆ ಡಿ.4ರಂದು ಬುಧವಾರ ಬೆಳಗ್ಗೆ 10:30 ಕ್ಕೆ ನಗರದ ಗ್ರಾಮದೇವತೆ ಶ್ರೀಕೆಂಪಮ್ಮ ದೇವಿ ದೇವಸ್ಥಾನದಿಂದ ಪ್ರತಿಭಟನೆ ಮತ್ತು ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಬಾಂಗ್ಲಾದೇಶದ ಸರ್ಕಾರ ಪ್ರಜಾಪ್ರಭುತ್ವ ಹಾಗೂ ಪ್ರಜಾತಾಂತ್ರಿಕ ಮೌಲ್ಯಗಳ ರಕ್ಷಣೆಗೆ ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು ಹಾಗೂ ಮತೀಯ ಉಗ್ರಗಾಮಿಗಳ ಪ್ರಭಾವಕ್ಕೆ ಬಲಿಯಾಗಬಾರದು. ಹಿಂದೂಗಳ ಮೇಲಿನ ಸುಳ್ಳು ಮೊಕದ್ದಮೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ, ಇಸ್ಕಾನ್ ನ ಹಿಂದೂ ಸಂತ ಪೂಜ್ಯ ಶ್ರೀಚಿನ್ಮಯ್ಯ ಕೃಷ್ಣದಾಸ ಹಾಗೂ ಅವರಿಗೆ ಆಹಾರ ಔಷಧಿ ನೀಡಲು ಹೋಗಿದ್ದ ಮತ್ತೆ ಇಬ್ಬರು ಸಂತರನ್ನು ವಾರಂಟ್ ಇಲ್ಲದೆ ಬಂಧಿಸಿರುವ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ವಿರೋಧಿಸಿ, ತಕ್ಷಣವೇ ಹಿಂದೂ ಸಂತರನ್ನು ಬಿಡುಗಡೆಗೊಳಿಸಬೇಕೆಂದು ಹಾಗೂ ಭಾರತ ಸರ್ಕಾರ ಮತ್ತು ಅಂತರಾಷ್ಟ್ರೀಯ ಸಮುದಾಯ ಅಲ್ಲಿನ ಸರ್ಕಾರದ ಮೇಲೆ ರಾಜ ತಾಂತ್ರಿಕ ಒತ್ತಡ ತಂದು ಅಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಜೀವನ, ಆಸ್ತಿ, ದೇವಸ್ಥಾನ ಶ್ರದ್ಧಾ ಕೇಂದ್ರ, ಉದ್ಯೋಗ ವ್ಯಾಪಾರ ಎಲ್ಲದರ ರಕ್ಷಣೆಗೆ ಅಲ್ಲಿನ ಸರ್ಕಾರವನ್ನು ಆಗ್ರಹಿಸಲು ಪ್ರತಿಭಟನೆ ಮತ್ತು ಮೆರವಣಿಗೆಯನ್ನು ನಗರದಲ್ಲಿ ನಾಳೆ ಹಮ್ಮಿಕೊಳ್ಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*