ತಿಪಟೂರು: ಶ್ರೀ ಜೈ ಮಾರುತಿ ಮಾಲೀಕರ ಮತ್ತು ಚಾಲಕರ ಸಂಘದ ವತಿಯಿಂದ ಮೂರನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು ಈ ಕಾರ್ಯಕ್ರಮಕ್ಕೆ ತಿಪಟೂರಿನ ಹೆಸರಾಂತ ವೈದ್ಯರು ಸಮಾಜ ಸೇವಕರು ಅಧ್ಯಕ್ಷರು ಶ್ರೀ ಸತ್ಯ ಕುಮಾರ್ ರಿಲೀಪ್ ಫೌಂಡೇಶನ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಬಸವ ಪ್ರಶಸ್ತಿ ಪುರಸ್ಕೃತ, ತಿಪಟೂರು ತಾಲೂಕಿನ ಕರ್ಣ, ವೈದ್ಯರತ್ನ, ಕಲ್ಪತರು ರತ್ನ ಡಾಕ್ಟರ್ ಜಿ ಶ್ರೀಧರ್ ಅವರು ನಾಡ ಧ್ವಜಾರೋಹಣ ಮಾಡುವುದರ ಮುಖಾಂತರ ಕಾರ್ಯಕ್ರಮವನ್ನು ಚಾಲನೆ ನೀಡಲಾಯಿತು ತದನಂತರ ವೇದಿಕೆಯಲ್ಲಿ ಜ್ಯೋತಿಯನ್ನು ಬೆಳಗಿಸುವ ಮುಖಾಂತರ ಮಾತನಾಡಿದ ಅವರು ಈ ದೇಶದಲ್ಲಿ ನಾಡ ಧ್ವಜ ಹಿಡಿದು ಅತಿ ಹೆಚ್ಚು ಜೈಕಾರಗಳನ್ನು ಕೂಗುತ್ತಾ ರಾಜ್ಯೋತ್ಸವವನ್ನು ಮಾಡುವವರು ಚಾಲಕರು ಚಾಲಕರಿಂದಲೇ ಈ ನಾಡಲ್ಲಿ ಕನ್ನಡಾಂಬೆಯ ಜೈಕಾರ ಮೊಳಗುತ್ತದೆ ಎಂದರು ಹಾಗೆ ಚಾಲಕರು ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳಬೇಕು ಎಂದರು, ಸತತ ಆರು ವರ್ಷಗಳ ಪ್ರಯತ್ನದಿಂದ ಕುಮಾರ್ ಆಸ್ಪತ್ರೆ ಇಎಸ್ಐ ಆಸ್ಪತ್ರೆ ಆಗಲಿದೆ ಎಂದು ತಿಳಿಸಿದರು ಮತ್ತು ಚಾಲಕ ವೃತ್ತಿ ಅತಿ ಮುಖ್ಯವಾದ ವೃತ್ತಿ ಆವೃತ್ತಿಯನ್ನು ನಿರ್ವಹಿಸುವ ನೀವು ಸಮಾಜದ ಆಸ್ತಿ, ಹಾಗೆ ಗ್ರಾಮೀಣ ಪ್ರದೇಶದಿಂದ ಬರುವಂತ ಮಹಿಳೆಯರನ್ನು ಸರಿಯಾದ ಸಮಯಕ್ಕೆ ಗಾರ್ಮೆಂಟ್ಸ್ ಗಳಿಗೆ ಬಿಡುವುದರಿಂದ ಕಾರ್ಖಾನೆಯ ಉದ್ದಿಮೆ ಸರಿಯಾಗಿ ನಡೆಯುತ್ತದೆ ಮಹಿಳೆಯರ ಜೀವನೋಪಾಯವೂ ಕೂಡ ನಡೆಯುತ್ತದೆ ಎಂದು ತಿಳಿಸಿದರು, ಸರ್ಕಾರಿ ವೈದ್ಯರಾದ ಡಾಕ್ಟರ್ ರಕ್ಷಿತ್ ಮಾತನಾಡಿ ಸಮಾಜದಲ್ಲಿ ಈ ದೇಶದಲ್ಲಿ ರಾಷ್ಟ್ರದ ಮತ್ತು ನಾಡ ಧ್ವಜಗಳನ್ನು ಹಿಡಿದು ನಾಡ ಭಕ್ತಿ ಮತ್ತು ದೇಶಭಕ್ತಿಯನ್ನು ಮೆರೆಸುವರು ಆಟ ಚಾಲಕರು ಮುಂಚೂಣಿಯಲ್ಲಿರುತ್ತಾರೆ ಎಂದು ತಿಳಿಸಿದರು, ಗುತ್ತಿಗೆದಾರರಾದ ನವಿಲೆ ಪರಮೇಶ್ ಮಾತನಾಡಿ ಗ್ರಾಮೀಣ ಪ್ರದೇಶದಿಂದ ಬರುವಂತಹ ಮಹಿಳೆಯರಿಗೆ ಬದುಕು ಕಟ್ಟಿಕೊಡಲು ಚಾಲಕರು ನಿರ್ಣಾಯಕ ಪಾತ್ರ ವಹಿಸುತ್ತಾರೆ ಇಂಥ ಕಾರ್ಯ ಮಾಡುವ ಇವರಿಗೆ ನನ್ನ ಧನ್ಯವಾದಗಳು ಎಂದು ತಿಳಿಸಿದರು ಜಾಕಿ ಗಾರ್ಮೆಂಟ್ಸ್ನ ಚಂದ್ರನ್ ಮಾತನಾಡಿ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಆಚರಿಸುವುದು ತುಂಬಾ ಹೆಮ್ಮೆಯ ವಿಚಾರ ಚಾಲಕರಿಗೂ ನಮ್ಮ ಗಾರ್ಮೆಂಟ್ಸ್ ಫ್ಯಾಕ್ಟರಿಗಳಿಗೂ ಅವಿನಾಬಾವ ಸಂಬಂಧವಿದೆ ಇಂತಹ ಪುಣ್ಯ ಕಾರ್ಯ ಮಾಡುತ್ತಿರುವ ನಿಮಗೆ ಶ್ಲಾಘನೀಯ ಎಂದು ತಿಳಿಸಿದರು, ದರ್ಶನ್ ಜಾಕಿ ಗಾರ್ಮೆಂಟ್ಸ್,ಲೋಕೇಶ್ ವೇರ್ ವೆಲ್ ಗಾರ್ಮೆಂಟ್ಸ್ನ ಎಚ್ ಆರ್, ಈಶ್ವರ್ ಈಶ್ವರ್ ಮೋಟರ್ಸ್, ಹರೀಶ್ ಸಿದ್ದು ಮೋಟರ್ಸ್, ಶ್ರೀ ಜೈ ಮಾರುತಿ ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಮಹೇಶ್, ರಂಗಸ್ವಾಮಿ ಉಪಾಧ್ಯಕ್ಷರು, ಪುಟ್ಟೇಗೌಡರು ಖಜಾಂಚಿ, ಹರ್ಷ ಕಾರ್ಯದರ್ಶಿ, ಜವರೇಗೌಡ, ಯತೀಶ್, ಮಧು, ಅಂಬರೀಶ್, ತೇಜು, ಕುಮಾರ್, ನವೀನ್, ರಾಘು, ನಾಗೇಶ್, ಚೇತು, ರಮೇಶ್, ಲೋಕೇಶ್, ಚಿನ್ನಿ, ಉಮೇಶ್, ಮಂಜಣ್ಣ, ಟಿ ರಾಜು ಹಾಗೂ ಸುತ್ತಮುತ್ತ ಗ್ರಾಮಸ್ಥರು ಮುಂತಾದವರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಇದೇ ಸಂದರ್ಭದಲ್ಲಿ ಎಲ್ಲಾ ಚಾಲಕರು ತಮ್ಮ ಆಟೋ ಮತ್ತು ವಾಹನಗಳನ್ನು ಮದುವಣಗಿತ್ತಿಯಂತೆ ಶೃಂಗಾರಗೊಳಿಸಿಕೊಂಡು ತಾಯಿ ಭುವನೇಶ್ವರಿಯ ಫೋಟೋವನ್ನು ಆಟೋದ ಮುಂದೆ ಕಟ್ಟಿಕೊಂಡು ಇಂಡಿಸ್ಕೆರೆ ಗೇಟ್ನಿಂದ ತಿಪಟೂರು ನಗರದ ಹಾಸನ ವೃತ್ತದ ವರೆಗೆ ಮೆರವಣಿಗೆ ಮಾಡಿದರು ನಗರದ ಜನತೆ ಇದನ್ನು ನೋಡಿ ಖುಷಿಪಡುತ್ತಾ ವಿಡಿಯೋ ಮತ್ತು ಫೋಟೋಗಳು ಮಾಡುತ್ತಿದ್ದುದು ವಿಶೇಷವಾಗಿತ್ತು.
ಶ್ರೀ ಜೈ ಮಾರುತಿ ಮಾಲೀಕರ ಮತ್ತು ಚಾಲಕರ ಸಂಘದ ವತಿಯಿಂದ ಮೂರನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ
ಡಿಸೆಂಬರ್ 03, 2024
0
Tags

