ತಾಲ್ಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ನೂತನ ಅಧ್ಯಕ್ಷರಾಗಿ ಲತಾಮಣಿ ಎಂ. ಕೆ ಪದ ಸ್ವೀಕಾರ

ಭಾಸ್ಕರ ಪತ್ರಿಕೆ
0

ತಿಪಟೂರು: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.), ಬೆಂಗಳೂರು ಸಂಸ್ಥೆ ಇಂದು ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣದ ಕಲ್ಪತರು ಗ್ರ್ಯಾಂಡ್ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ ಪದಸ್ವೀಕಾರ ಸಮಾರಂಭದಲ್ಲಿ ತಿಪಟೂರು ತಾಲ್ಲೂಕಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ನೂತನ ಅಧ್ಯಕ್ಷರಾಗಿ ಸಾಹಿತಿ, ಶಿಕ್ಷಕಿ, ಸಂಘಟಕಿಯಾದ ಲತಾಮಣಿ ಎಂ. ಕೆ. ತುರುವೇಕೆರೆ ಜವಾಬ್ದಾರಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ಹಿರಿಯ ಸಾಹಿತಿ ಡಾ. ಬಿ. ಸಿ. ಶೈಲಾ ನಾಗರಾಜ್, ಜಿಲ್ಲಾ ಗೌರವ ಸಲಹೆಗಾರ ದೊಂಬರಹಳ್ಳಿ ನಾಗರಾಜ್, ಕಲ್ಪತರು ಗ್ರ್ಯಾಂಡ್ ಹೋಟೆಲ್ ಮಾಲೀಕರಾದ ನಿಜಗುಣ, ನಿವೃತ್ತ ಯೋಧ ಸುಬೇದಾರ್ ಚಂದ್ರಶೇಖರಪ್ಪ, ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ ತಿಪಟೂರು ತಾಲ್ಲೂಕಿನ ಗೌರವಾಧ್ಯಕ್ಷರಾದ ಡಾ. ಭಾಸ್ಕರ್, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ. ಆರ್. ಗುರುಸ್ವಾಮಿ, ಕಲ್ಪತರು ಸೆಂಟ್ರಲ್ ಶಾಲೆಯ ಶಿಕ್ಷಕಿ ಲತಾ ಟಿ. ಎಸ್, ಸಂಗೀತ ಶಿಕ್ಷಕಿ ಚಿತ್ರಾ, ನಿರೂಪಕಿ ಸ್ಟೆಲ್ಲಾ ಸಂತೋಷ್ ಮುಂತಾದವರು ಹಾಜರಿದ್ದರು.

ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ ತಿಪಟೂರು ತಾಲ್ಲೂಕಿನ ಗೌರವಾಧ್ಯಕ್ಷರು ಹಾಗೂ ಭಾಸ್ಕರ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ. ಭಾಸ್ಕರ್ ಅವರಿಗೆ ಗೌರವಿಸಿ ಸನ್ಮಾನಿಸಿದ ಸಂದರ್ಭ


ನಿವೃತ್ತ ಯೋಧ ಸುಬೇದಾರ್ ಚಂದ್ರಶೇಖರಪ್ಪನವರಿಗೆ ಗೌರವಿಸಿ ಸನ್ಮಾನಿಸಿದ ಸಂದರ್ಭ




ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*