ಶ್ರೀ ನರಸಿಂಹಮೂರ್ತಿ ಕೆ ಇ ಬಿ ಅವರಿಗೆ ತಾಲೂಕಿನ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಕಿರು ಸನ್ಮಾನ

ಭಾಸ್ಕರ ಪತ್ರಿಕೆ
0


ತಿಪಟೂರು: ಇಂದು ನಗರದ ಕರ್ನಾಟಕ ವಿದ್ಯುಚಕ್ತಿ ಮಂಡಳಿ ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಶಕ್ತಿ ಗಣಪತಿ ದೇವಸ್ಥಾನದ ರೂವಾರಿಗಳು ತಾಲೂಕಿನ ಹಿರಿಯ ದಲಿತ ಮಾರ್ಗದರ್ಶಿಗಳು ತಾಲೂಕಿನ ಮುಂಚೂಣಿ ನಾಯಕರಾದ ಶ್ರೀ ನರಸಿಂಹಮೂರ್ತಿ ಕೆ ಇ ಬಿ ಅವರಿಗೆ  ತಾಲೂಕಿನ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಶ್ರೀ ಶಕ್ತಿ ಗಣಪತಿ ದೇವಸ್ಥಾನದ ಮುಂಭಾಗ ಒಂದು ಕಿರು ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಈ ಸನ್ಮಾನವನ್ನು ಸ್ವೀಕರಿಸಿದ ಸಂದರ್ಭದಲ್ಲಿ ನರಸಿಂಹಮೂರ್ತಿ ಅವರು ಮಾತನಾಡಿ ನನಗೆ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದ ಅರ್ಚಕರಾದ ಸಂದೇಶ್ ರಾವ್ ಬ್ರಹ್ಮಾವರ ತಾಲೂಕ್ ಶಿವನಗರ ಇವರ ಕೃಪಾಕಟಾಕ್ಷವಿದೆ ನಾನು ಮಾಡುವ ಕೆಲಸದಲ್ಲಿ ನಿಮಿತ್ತ ಮಾತ್ರ ನಿಮ್ಮೆಲ್ಲರ ಸಂಪೂರ್ಣ ಸಹಕಾರದಿಂದ ನಾನು ಇಂತಹ ಕೆಲಸ ಕಾರ್ಯಗಳಲ್ಲಿ ತೊಡಗಿದ್ದೇನೆ ಇನ್ನು ಮುಂದೆಯೂ ಸಹ ನನ್ನ ಕೈಲಾಗುವಷ್ಟು ಮಟ್ಟಿಗೆ ದಲಿತರ ಏಳಿಗೆಗಾಗಿ ಮತ್ತು ದಲಿತರ ಸಮಸ್ಯೆ ಗಾಗಿ ಸ್ಪಂದಿಸುವ ಕೆಲಸ ಮಾಡುತ್ತೇನೆ ಈ ತಾಲೂಕಿನ ದಲಿತರ ಸಂಪೂರ್ಣ ಸಹಕಾರ ನನಗೆ ಇರಲಿ ಎಂದು ಕೇಳಿಕೊಳ್ಳುತ್ತೇನೆ ಎಂದರು.

ನಂತರ ಕುಪ್ಪಾಳು ರಂಗಸ್ವಾಮಿ ಮಾತನಾಡಿ ಶ್ರೀಯುತ ನರಸಿಂಹಮೂರ್ತಿ ಅವರು ತಾಲೂಕಿನಲ್ಲಿ ನಡೆಯುವ ಎಲ್ಲಾ ದಲಿತಪರ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಮುಂಚೂಣಿಯಾಗಿ ನಿಂತು ಬೆಂಬಲವನ್ನು ನೀಡುವುದರ ಮುಖಾಂತರ ತಾಲ್ಲೊಕಿನ  ಮಂಚೂಣಿ ನಾಯಕರೇನಿಸಿದ್ದಾರೆ  ಇವರ ಸಹಕಾರ ನಮಗಿರಲಿ ನಮ್ಮ ಸಂಪೂರ್ಣ ಬೆಂಬಲ ಅವರಿಗೆ ಇರುತ್ತದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಹಿರಿಯ ದಲಿತ ಮುಖಂಡರಾದ ಶಾಂತಪ್ಪ ಕೊಪ್ಪ ರಂಗಸ್ವಾಮಿ ಕುಪಾಳು ಚಂದ್ರಣ್ಣ ಗಾಂಧಿನಗರ ಬಸವರಾಜು ಗಾಂಧಿನಗರ ಪ್ರಸನ್ನ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ರಿ) ದಾದಾಸಾಹೇಬ್ ಎನ್ ಮೂರ್ತಿ ಸ್ಥಾಪಿತ ತಾಲ್ಲೂಕು ಅಧ್ಯಕ್ಷರಾದ ಟಿ ರಾಜು ಬೆಣ್ಣೇನಹಳ್ಳಿ, ಓಂಕಾರ ಹಾಲ್ಕುರ್ಕೆ, ಕೆಇಬಿ ಯ ಕೆಲವು ಸಿಬ್ಬಂದಿಗಳು ಆಗಮಿಸಿದ್ದರು.   

ವರದಿ: ಟಿ. ರಾಜು ಬೆಣ್ಣೇನಹಳ್ಳಿ;

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*