ಸಾಲಿಗ್ರಾಮ: 08/02/2025 ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ 144 ವರ್ಷಗಳ ನಂತರ ಮಹಾ ಕುಂಭಮೇಳ ನಡೆಯುತ್ತಿದ್ದು. ಅಲ್ಲಿಗೆ ಮೈಸೂರು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಸಾ. ರಾ. ನಂದೀಶ್ ರವರು ಮತ್ತು ಶ್ರೀ ಭೈರವೇಶ್ವರ ಇಂಟರ್ನ್ಯಾಷನಲ್ ಸ್ಕೂಲ್, ಸಾಲಿಗ್ರಾಮ ಅಧ್ಯಕ್ಷರಾದ ಕೆ. ಎಸ್ ರಮೇಶ್ ಬಿ. ಡಿ. ಎಸ್ ಸುನಿಲ್, ಹೇಮಂತ್ ಕುಮಾರ್ ಬಳಗದವರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಶಾಲೆಯ ಮಕ್ಕಳಿಗೆ ತ್ರಿವೇಣೆ ಸಂಗಮವಾದ ಗಂಗಾ ನದಿ, ಯಮುನಾ ನದಿ ಮತ್ತು ಸರಸ್ವತಿ ನದಿಗಳು ಒಂದೇ ಸ್ಥಳದಲ್ಲಿ ಉದ್ಭವಿಸಿರುವ ತೀರ್ಥವನ್ನು ತಂದಿದ್ದು ಶಾಲೆಯ ಕಾರ್ಯದರ್ಶಿಗಳಾದ ಸಿ. ಪಿ ತ್ರಿವೇಣಿ ರವರು ಮತ್ತು ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಮಕ್ಕಳ ತಲೆಯ ಮೇಲೆ ತೀರ್ಥವನ್ನು ಹಾಕಿ ಆಶೀರ್ವಾದ ಮಾಡಿದರು.
