ಭಾರತ ಮಾತೆ ಪೂಜೆ ಹಾಗೂ ಅಮ್ಮನ ಕೈ ತುತ್ತು ಕಾರ್ಯಕ್ರಮ

ಭಾಸ್ಕರ ಪತ್ರಿಕೆ
0


ತಿಪಟೂರು: ಜೈ ವಾಸವಿ ಆರ್ಯವೈಶ್ಯ ಮಂಡಳಿ  ಹಾಗೂ ಆರ್ಯವೈಶ್ಯ ಕೋ ಆಪರೇಟಿವ್ ಸೊಸೈಟಿ  ಇವರ ಸಹಯೋಗದೊಂದಿಗೆ ಶ್ರೀ ವಾಸವಿ ಯುವತಿಯರ ಸಂಘದ ವತಿಯಿಂದ ಭಾರತ ಮಾತೆ ಪೂಜೆ ಹಾಗೂ ಅಮ್ಮನ ಕೈ ತುತ್ತು ಕಾರ್ಯಕ್ರಮ ದಿನಾಂಕ 7 / 02 / 2025 ರಂದು ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದ ಆವರಣದಲ್ಲಿ ಸುಮಾರು 300 ಜನರು ಭಾಗಿಯಾಗಿ ಭಾರತ ಮಾತೆಗೆ ಪುಷ್ಪಾರ್ಚನೆಯ ನಂತರ ಮಾತೆಯರಿಂದ ಕೈತುತ್ತಿನ ಕಾರ್ಯಕ್ರಮ ವೈಭವೋಪೇತವಾಗಿ ಜರುಗಿತು. 

ನಮ್ಮ ಸನಾತನ ಸಂಸ್ಕೃತಿಗಳಲ್ಲಿ ಮಾತೃಭೋಜನವೂ ಒಂದು ಅವಿಭಾಜ್ಯ ಅಂಗ ಮಾತೃ ಪ್ರೇಮ, ಧನಾತ್ಮಕ ಶಕ್ತಿ, ಒಗ್ಗಟ್ಟು, ಎಲ್ಲದರ ಸಂಕೇತ ಈ ಮಾತೃ ಭೋಜನ ಎಂಬ ನಿಟ್ಟಿನಲ್ಲಿ ಶ್ರೀ ವಾಸವಿ ಯುವತಿಯರ ಸಂಘವು ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. 

ಈ ಕಾರ್ಯಕ್ರಮದಲ್ಲಿ ಶ್ರೀ ವಾಸವಿ ಯುವತಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಅನುಷಾ ಕೃಷ್ಣ ಹಾಗೂ ಪದಾಧಿಕಾರಿಗಳು, ಆರ್ಯವೈಶ್ಯ ಮಂಡಳಿಯ ಶ್ರೀಯುತ ವಿಶ್ವನಾಥ ಬಾಬು ಹಾಗೂ ಪದಾಧಿಕಾರಿಗಳು ಮತ್ತು ವೈಶ್ಯ ಕೋ ಆಪರೇಟಿವ್  ಸೊಸೈಟಿಯ ಅಧ್ಯಕ್ಷರಾದಂತಹ ಶ್ರೀಯುತ ಟಿ ಎಸ್ ಸುಬ್ರಹ್ಮಣ್ಯರವರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*