ಸನಾತನ ಧರ್ಮದ ಮಹಿಮೆ, ಜಗದ್ಗುರುಗಳ ಆಶಯ

ಭಾಸ್ಕರ ಪತ್ರಿಕೆ
0

ಹಾಸನ: ದೇವಸ್ಥಾನ, ಮಠ ಮಾನ್ಯಗಳು, ಸನ್ಯಾಸತ್ವ, ಸಂಪ್ರದಾಯ, ಭಕ್ತಿಯ ಸಂಸ್ಕೃತಿ ಈ ಸಮಾಜದಲ್ಲಿ ಎಲ್ಲಿಯ ವರೆವಿಗೂ ಜೀವ೦ತವಾಗಿ ಇರುತ್ತದೆಯೋ ಅಲ್ಲಿಯವರೆವಿಗೂ ಹಿಂದೂ ಧರ್ಮದ ಅಸ್ತಿತ್ವಕ್ಕೆ ಯಾವುದೇ ದಕ್ಕೆ ಇರುವುದಿಲ್ಲ ಎಂದು ಅರಕಲಗೂಡು ತಾಲೋಕು ಅರೇ ಮಾದನಹಳ್ಳಿ ವಿಶ್ವ ಬ್ರಾಹ್ಮಣ ಮಹಾಸಂಸ್ಥಾನ ಮತ ವಿಶ್ವಕರ್ಮ ಪೀಠದ ಜಗದ್ಗುರುಗಳಾದ ಪರಮಪೂಜ್ಯ ಶ್ರೀ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಶ್ರೀ ಮಠದಲ್ಲಿ ಅಮ್ಮಿಕೊಳ್ಳಲಾಗಿದ್ದ ಶ್ರೀ ವಿಶ್ವಕರ್ಮ ಪರಮಪೂಜ್ಯ ಅನಂತ ಶ್ರೀ ವಿಭೂಷಿತ ಶ್ರೀಮದ್‌ ಆದಿ ಜಗದ್ಗುರು ಸ೦ಜ್ಞಾನ ಪ್ರಭ ಮಹಾಸ್ವಾಮಿ ಭಗವತ್ಪಾದ೦ಗಳವರ ಜಯಂತಿ ಮಹೋತ್ಸವ ಮತ್ತು ಸಾಮೂಹಿಕ ಉಪನಯನ ಮಹೋತ್ಸವ ಸಮಾ ರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಈ ಮಠಕ್ಕೆ 5 ವರ್ಷಗಳು ತುಂಬಿದರೆ ಸಹಸ್ರ ವರ್ಷಗಳನ್ನು ಪೂರೈಸಿ ಅತ್ಯಂತ ಪ್ರಾಚೀನ ಸನಾತನ ಮತವೆಂಬ ಖ್ಯಾತಿ ಈ ವಿಶ್ವಕರ್ಮ ಜಗದ್ಗುರು ಪೀಠಕ್ಕೆ ಇದೆ. ಎಲ್ಲಾ ಸಮುದಾಯಗಳನ್ನ ಸಮಾನವಾಗಿ ಕರೆದೊಯ್ಯಲು ನಮ್ಮ ಸನಾತನ ಸಂಸ್ಕೃತಿ ಮಾರ್ಗದರ್ಶನವಾಗಿದೆ ಸನಾತನ ಧರ್ಮ ಮತ್ತು ಸಮುದಾಯದ ಎಲ್ಲಾ ಮಠ ಮಾನ್ಯಗಳ ಪೀಠಾಧಿಪತಿಗಳು ಒಳಗೊಂಡಂತೆ ಭಾರತೀಯ ಸಂತ ಪರಿಷತ್‌ ಅನ್ನು ಸ್ಥಾಪಿಸಿದ್ದೇವೆ. ಪ್ರತಿಯೊಬ್ಬರ ಜೀವನ ಧರ್ಮದ ನೆಲೆಗಟ್ಟಿನಲ್ಲಿ ನಡೆಯಬೇಕು ಇಂದು ನಾವು ಆ ಜಾತಿ ಈ ಜಾತಿ ಎನ್ನದೆ ವಿಶ್ವ ಭ್ರಾತೃತ್ವವನ್ನು ಇಟ್ಟುಕೊಳ್ಳಬೇಕಾಗುತ್ತದೆ. 

ದ್ವೇಷ ಅಸೂಯೆಗಳು ಎಂಬುದು ಸಂಬಂಧಗಳನ್ನು ಹಾಗೂ ಮಾನವನ ಮಾನಸಿಕ ನೆಮ್ಮದಿಯನ್ನು ಹಾಳುಮಾಡುತ್ತವೆ ಆದ್ದರಿಂದ ಪ್ರತಿಯೊಬ್ಬ ಮನುಷ್ಯನು ತಾಳ್ಮೆ ಸಹನೆಯನ್ನು ಮೈಗೂಡಿಸಿಕೊಳ್ಳಬೇಕು.ಎಲ್ಲಾ ಧರ್ಮ ಪೀಠಗಳು ಕೂಡ ಮನುಕುಲದ ಒಳಿತಿಗಾಗಿಯೇ ಇರುವವುಗಳು ಯಾವುದೇ ಒಬ್ಬ ವ್ಯಕ್ತಿಯ ಅಥವಾ ಕುಟುಂಬದ ಒಳಿತಿಗಾಗಿ ಇರುವುದಿಲ್ಲ ಎಂದರು. ಚನ್ನಗಿರಿಯ ಸಾವಿತ್ರಿ ಪೀಠದ ಪರಮಪೂಜ್ಯ ಶ್ರೀ ಶ್ರೀ ಶಂಕರಾತ್ಮನಂದ ಸರಸ್ವತಿ ಮಹಾಸ್ವಾಮಿಗಳು ತಮ್ಮ ಆಶೀರ್ವಚನ ನೀಡಿ ನಾಗ ಸಾಧುಗಳು ಹಿಂದೂ ಧರ್ಮಕ್ಕೆ ಕಿಂಚಿತ್ತೂ ಚ್ಯುತಿ ಬಾರದ ಹಾಗೆ ರಕ್ಷಿಸುವ ಸೈನಿಕರಿದ್ದಂತೆ ಗಂಗನದಿಯ ಪ್ರಯಾಗ್ ರಾಜ್ 144 ವರ್ಷಕೊಮ್ಮೆ ಬರುವ ಮಹಾ ಕುಂಭಮೇಳ 12 ವರ್ಷ ಪೂರ್ಣ ಕುಂಭಮೇಳ 6 ವರ್ಷಕ್ಕೆ ಅರ್ಧ ಕುಂಭಮೇಳ ಜರುಗುತ್ತದೆ.

ಪೂರ್ವಜರು ಹೇಳಿದ ರೀತಿಯಲ್ಲಿ ಗಂಗಾ ಸ್ನಾನ ತುಂಗಾಪಾನ ಎಂಬ ಮಾತು ಅಷ್ಟೇ ಸತ್ಯವಾಗಿದೆ ಗುರು, ಗುರು ಮಠ, ದೇವಾಲಯಗಳು ಸಾರ್ವಜನಿಕರ ಅಸ್ತಿಯೇ ಹೊರತು ಬೇರೆ ಯಾವುದೇ ಒಬ್ಬ ವ್ಯಕ್ತಿಯ ಸ್ವತ್ತಲ್ಲ ಆದಿ ಶಂಕರಾಚಾರ್ಯರು ಸನಾತನ ಹಿಂದೂ ಧರ್ಮದ ಪ್ರಚಾರಕ್ಕಾಗಿ ಉತ್ತರದಲ್ಲಿ: ಬದರಿ ಪೀಠ ಉತ್ತರ ಜ್ಯೋತಿ‌ ಮಠ-ದಕ್ಷಿಣದಲ್ಲಿ: ಶೃಂಗೇರಿ ಪೀಠ - - ದಕ್ಷಿಣ ಶಾರದಾ ಮಠ ಪೂರ್ವದಲ್ಲಿ: ಪುರಿ ಪೀಠ - ಪೂರ್ವಾ ಗೋವರ್ಧನ ಮಠ ಪಶ್ಚಿಮದಲ್ಲಿ ದ್ವಾರಕಾ ಪೀಠ - ಪಶ್ಚಿಮ ಮಠ ಕಾಳಿಕಾ ಪೀಠದೇಶದ ನಾಲ್ಕು ದಿಕ್ಕುಗಳಲ್ಲೂ ಮೇಲ್ಕಂಡ ಮತಗಳನ್ನು ಸ್ಥಾಪಿಸಿ ಹಿಂದೂ ಧರ್ಮದ ಉಳಿವಿಗಾಗಿ ಶ್ರಮಿಸಿದರು.

ಮಕ್ಕಳನ್ನು ಸಂಸ್ಕಾರ ಕಲಿಸುವ ಶಾಲೆಗೆ ಕಳುಹಿಸಿ ಸಂಸ್ಕಾರವನ್ನು ಅಳಿಸುವ ಶಾಲೆಗಳಿಗೆ ಕಳುಹಿಸುವ ಅಗತ್ಯ ಇಲ್ಲ ಪ್ರಸ್ತುತ ಸಮಾಜದಲ್ಲಿ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಅತೀ ಮುಖ್ಯ ಮಕ್ಕಳನ್ನು ವೈದಿಕ ಪರಂಪರೆಯ ತಳಹದಿಯಲ್ಲಿ ಬೆಳೆಸಬೇಕು ಎಂದು ಹಿತವಚನ ತಿಳಿಸಿದರು. 

ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು ಜಗದ್ಗುರು ಶಂಕರಾಚಾರ್ಯ ಭಗವತ್ಪಾದ ಅದೈತಪೀಠ ಹುಬ್ಬಳ್ಳಿ, ಪರಮಪೂಜ್ಯ ಶ್ರೀ ಶ್ರೀ ಬಸವರಾಜೇಂದ್ರ ಸ್ವಾಮಿಗಳು ವಿರಕ್ತಮಠ ಕೆಸವತ್ತೂರು, ಶ್ರೀಮಠದ ಗೌರವ ಸಲಹೆಗಾರರಾದ ಬಿ.ಸಿ ಶಂಕರಾಚಾರ್, ಕಂಟ್ರಾಕ್ಟರ್ ಚಂದ್ರಶೇಖರ್, ಹೊಳೆನರಸೀಪುರ ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ, ಗಂಗಾಧರಚಾರ್, ಹಾಸನ ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಕುಮಾರಚಾರ್, ಉಪಾಧ್ಯಕ್ಷ ವಿಶ್ವಕರ್ಮ ಬ್ಯಾಟರ೦ಗಚಾರ್, ಸಮುದಾಯಗಳ ಅಭಿವೃದ್ಧಿ ನಿಗಮದ ನಾಮನಿರ್ದೇಶಕ ಸದಸ್ಯ ವೀರಭದ್ರ ಸ್ವಾಮಿ ಸೇರಿದಂತೆ ವಿಶ್ವಕರ್ಮ ಸಮಾಜ ಬಾಂಧವರು ಉಪಸ್ಥಿತರಿದ್ದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*