ಗೊಮ್ಮಟವಾಣಿ ಪತ್ರಿಕೆಯ ಸಂಪಾದಕರಾಗಿ ಸುಮಾರು 40 ವರ್ಷಗಳಿಗೂ ಹೆಚ್ಚು ಸೇವೆ ಸಲ್ಲಿಸಿದ್ದ ಶ್ರೀ ಎಸ್. ಎನ್. ಅಶೋಕ್ ಕುಮಾರ್ ರವರು ಇಂದು ಬೆಳಗ್ಗೆ ನಿಧನರಾಗಿರುತ್ತಾರೆ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಲೆಂದು ಪತ್ರಿಕಾ ರಂಗದಲ್ಲಿ ಇವರ ಶಿಷ್ಯಂದಿರಾದ ಜ್ಯೋತಿ ಜಯಶಂಕರ್, ಗುಣಚಂದ್ರ ಕುಮಾರ್ ಹಾಗೂ ಭಾಸ್ಕರ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ. ಭಾಸ್ಕರ್ ಸಂತಾಪ ಸೂಚಿಸಿದ್ದಾರೆ.

