ದೆಹಲಿ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಅತ್ಯಧಿಕ ಬಹುಮತ: ಕಲ್ಪತರು ನಾಡಿನಲ್ಲಿ ಸಂಭ್ರಮಾಚರಣೆ

ಭಾಸ್ಕರ ಪತ್ರಿಕೆ
0

ತಿಪಟೂರು: ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಇಂದು  ಬಿಜೆಪಿ ಹೆಚ್ಚು ಬಹುಮತ ಪಡೆದಿರುವುದಕ್ಕೆ ಇಂದು ತಿಪಟೂರಿನ ಸಿoಗ್ರಿ ನಂಜಪ್ಪ ವೃತ್ತ ದಲ್ಲಿ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮತ್ತು ಬಿ ಜೆ ಪಿ ಯ ಅಪಾರ ಬೆಂಬಲಿಗರೊಂದಿಗೆ ಸಿಹಿ ಹಂಚಿ ಸಂಭ್ರಮಾಚರಣೆ ಆಚರಿಸಿದರು.

ನಂತರ ಮಾತನಾಡಿದ ಮಾಜಿ ಶಿಕ್ಷಣ ಸಚಿವ ಬಿಸಿ ನಾಗೇಶ್ ದೆಹಲಿಯಲ್ಲಿ ಯಾವ ಯಾವ ಹಗರಣಗಳಲ್ಲಿ ಭಾಗಿಯಾಗಿದ್ದರೂ ಅವರನ್ನೆಲ್ಲ ಜನರು ಸೋಲಿಸಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚು ಮತಗಳಿಂದ ಗೆಲುವು ತಂದುಕೊಟ್ಟು ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದರು.


ಇದೇ ಸಂದರ್ಭದಲ್ಲಿ ನಗರದ ಶಿವಕುಮಾರ ಸ್ವಾಮೀಜಿ ವೃತ್ತ (ಹಾಸನ ಸರ್ಕಲ್)‌ ಬಳಿಯಿರುವ ಭಾಸ್ಕರ ಪತ್ರಿಕೆ ಕಚೇರಿಯಲ್ಲಿ ಪ್ರಧಾನ ಸಂಪಾದಕರಾದ ಡಾ. ಭಾಸ್ಕರ್‌ ನೇತೃತ್ವದಲ್ಲಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.

ಈ ಸಂಭ್ರಮಾಚರಣೆಯಲ್ಲಿ ಎಲ್.ಐ.ಸಿ ಜಯದೇವಪ್ಪ, ಬೂಸ ರಾಜಣ್ಣ, ಮಾದಿಹಳ್ಳಿ ಕುಮಾರ್‌ ಮತ್ತು ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*