ಕಲ್ಪತರು ನಾಡಿನಲ್ಲಿ ಐದು ಸರಣಿ ಅಪಘಾತ: ಇದು ಕರಾಳ ಶುಕ್ರವಾರದ ವರದಿ

ಭಾಸ್ಕರ ಪತ್ರಿಕೆ
0


ತಿಪಟೂರು: ತಾಲ್ಲೂಕಿನಲ್ಲಿ ವಿವಿಧ ಕಡೆದ ಅಪಘಾತದಲ್ಲಿ ಐವರು ದುರ್ಮರಣಹೊಂದಿರುವ,ಘಟನೆ ನಡೆದಿದ್ದು, ತಿಪಟೂರು ತಾಲ್ಲೂಕಿನ ನೊಣವಿನಕೆರೆ ಹೋಬಳಿ ಆಲ್ಬೂರು ಕೆರೆ ಏರಿಯ ಮೇಲೆ ಬೈಕ್ ಗೆ ಕೆ.ಎಸ್ ಆರ್ ಟಿ ಸಿ ಬಸ್ ಡಿಕ್ಕಿ ಹೊಡೆದು,ಬೈಕ್ ಸವಾರರು ಸ್ಥಳದಲ್ಲೆ ಮೃತಪಟ್ಟ ತುರುವೇಕೆರೆ ಮಡಿವಾಳ ಬೀದಿ ವಾಸಿ ಯೋಗೇಶ್ (24)ಬಿನ್ ಬಸವರಾಜು, ಮೆಕ್ಯಾನಿಕ್ ಕೆಲಸ ಹಾಗೂ ದಯಾನಂದ (23) ಬಿನ್ ಶ್ರೀನಿವಾಸ್ ವೆಲ್ಡಿಂಗ್ ಕೆಲಸ. ಇಬ್ಬರು ನೊಣವಿನಕೆರೆಯಿಂದ ತುರುವೇಕೆರೆ ನಗರಕ್ಕೆ ತೆರಳುವಾಗ ಆಲ್ಬೂರು ಕೆರೆ ಏರಿ ಮೇಲೆ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಖಾದರ್ ಭೇಟಿ ನೀಡಿದ್ದು ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕಾಳಮ್ಮಗುಡ್ಡದ ಅಯ್ಯನ ಕೆರೆಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು
ತಿಪಟೂರು ತಾಲ್ಲೋಕು ಹೊನ್ನವಳ್ಳಿ ಹೋಬಳಿ ಪ್ರಸಿದ್ದ ಯಾತ್ರಾಕ್ಷೇತ್ರ ಕಾಳಮ್ಮನ ಬೆಟ್ಟದ ಅಯ್ಯನ ಕೆರೆಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು. ತಿಪಟೂರು ತಾಲ್ಲೋಕಿನ ಬೊಮ್ಮೆನಹಳ್ಳಿ, ತಾಂಡ್ಯಾ ನಿವಾಸಿ ಮಂಜಾನಾಯ್ಕ ಬಿನ್ ಲಕ್ಷ್ಮಾನಾಯ್ಕ 45 ವರ್ಷ ಮೃತ ದುರ್ದೈವಿ ಸ್ಥಳಕ್ಕೆ ಹೊನ್ನವಳ್ಳಿ ಪೊಲೀಸ್ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಪೊಲೀಸರು ಭೇಟಿ ನೀಡಿದ್ದು ಶವಪತ್ತೆಗಾಗಿ ಹುಡುಕಾಟ ಕೈಗೊಳ್ಳಲಾಗಿದೆ.
ತಿಪಟೂರು ತಾಲ್ಲೋಕಿನ ಕಸಬಾ ಹೋಬಳಿ ತಡಸೂರು ಗೇಟ್ ಬಳಿ KA 44 U 2575 ಹೋಡಾ ಆಕ್ಟೀವಾ ಬೈಕ್ ಗೆ KA06 MB 4308 ಕಾರು ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ.



ತಾಲ್ಲೋಕಿನ ಸಿದ್ದರಾಮೇದೇವರ ಪಾಳ್ಯ ನಿವಾಸಿ ಕಾಶಿನಾಥ್ ಬಿನ್ ದೊಡ್ಡಶಂಕರಯ್ಯ 71 ವರ್ಷ ಮೃತದುರ್ದೈವಿ,
ಸ್ಥಳಕ್ಕೆ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ತಿಪಟೂರು ತಾಲ್ಲೂಕಿನ ಅರಳಗುಪ್ಪೆ ಗ್ರಾಮದ ಅರಳಗುಪ್ಪೆ ಪ್ರಾಥಮಿಕ ಕೃಷಿ ಸಹಕಾರ ಸಂಘದ ನಿರ್ದೇಶಕಿ ಪಾರ್ವತಮ್ಮ ತಮ್ಮ ಆಕ್ಟೀವಾ ಬೈಕ್ ನಲ್ಲಿ ತೆರಳುವಾಗ ನಿಯಂತ್ರಣತಪ್ಪಿ ಕೆಳಕ್ಕೆ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಸ್ಥಳದಲ್ಲೆ ಮೃತಪಟ್ಟಿರುತ್ತಾರೆ. ಒಂದೇ ದಿನ ಐದು ಸಾವು ಸಂಭವಿಸಿದ್ದು, ಕಾರಾಳ ಶುಕ್ರವಾರವಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*