ತಿಪಟೂರು: ನಗರದ ಕೋಟೆ ಶ್ರೀ ಪಂಚಬ್ರಹ್ಮ ಕಾಳಿಕಾದೇವಿ 23ನೇ ವರ್ಷದ ದೇವಾಲಯದಲ್ಲಿ ವಾರ್ಷಿಕೋತ್ಸವ ಪಂಚಾಮೃತ ಮಾಡಲಾಯಿತು, ಗುರುವಾರ ಸಂಜೆ ಗೋಧೂಳಿ ಲಗ್ನದಲ್ಲಿ ಗಂಗಾವರಣ ನಂತರ ಆಲಯ ಪ್ರವೇಶ, ಮಹಾಗಣಪತಿ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಪಂಚಬ್ರಹ್ಮ ಕಾಳಿಕಾ ದೇವಿಯವರಿಗೆ ಅಭಿಷೇಕವನ್ನು ಪೂಜೆ. ಸ್ವಸ್ತಿ ಪುಣ್ಯ ವಾಚನ ದೇವನಾಂದಿ ನವಗ್ರಹ ಉದಾಧನೆ ಪಂಚಬ್ರಹ್ಮ ಸಹಿತ ವಿಶ್ವಕರ್ಮ ಆರಾಧನೆ, ಕಾಳಿಕಾದೇವಿಯವರ ಪ್ರಧಾನ ಕಳಸ ಸ್ಥಾಪನೆ, ದೇವತಾ ಪೂಜಾ ನಂತರ ಮಾಮರಪತಿ ಮತ್ತು ತಿಷ್ಣ ಪ್ರದ ವಾಯಿತು
ಫೆಬ್ರವರಿ 7ರಂದು ಶುಕ್ರವಾರ ಪ್ರಾತಃ ಕಾಲ ಬೆಳಗ್ಗೆ 6:00 ಗಂಟೆಗೆ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಗಣಪತಿ ಹೋಮ, ಅಷ್ಟ ದಿಕ್ಷಾಲಕ ಹೋಮ, ಗಾಯತ್ರಿ ವಿಶ್ವಕರ್ಮ ಹೋಮ, ದುರ್ಗಾ ಹೋಮ, ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಯವರ ಹೋಮ, ಪ್ರಧಾನ ಕಾಳಿಕಾ ದೇವರ ಸುಮಂಗಲಿಯರಿಂದ ಹೋಮ, ಲಲಿತ ಸಹಸ್ರನಾಮ ನಂತರ ಬೆಳಿಗ್ಗೆ 11:30 ಗಂಟೆಗೆ ಪೂರ್ಣಹುತಿ ನಂತದ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ, ಮಧ್ಯಾಹ್ನ 12 ಗಂಟೆಗೆ ನಗರದ ರಾಜಬೀದಿಗಳಲ್ಲಿ ಶ್ರೀ ಪಂಚಬ್ರಹ್ಮ ಕಾಳಿಕಾದೇವಿಯವರ ಉತ್ಸವ ಮೂರ್ತಿಯ ಮೆರವಣಿಗೆ ಏರ್ಪಡಿಸಲಾಗಿತ್ತು,
ಕಾರ್ಯಕ್ರಮದಲ್ಲಿ ಆಹ್ವಾನಿತರಾಗಿ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಬಿಜೆಪಿ ಮುಖ೦ಡರಾದ ಲೋಕೆಶ್ವರ್, ಜೆ ಡಿ ಎಸ್ ಉಪಾಧ್ಯಕ್ಷರಾದ ಮೇಘಾ ಸುಜಿತ್, ನಗರಸಭಾ ಸದಸ್ಯರಾದ ಓಹಿಲ ಗಂಗಾಧರ್, ವಿಶ್ವಕರ್ಮ ಮಹಿಳಾ ರಾಜ್ಯಾಧ್ಯಕ್ಷರಾದ ವಸಂತ ಮುರಳಿ ಸೇರಿದಂತೆ ಭಕ್ತರು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
