ಬೆಳಗೂರಿನಲ್ಲಿ ಮಾ.22 ರಂದು ಕ.ವಿ.ಜ.ಸೇ ಸಂಘದ 5ನೇ ವಾರ್ಷಿಕೋತ್ಸವದ ಪೂರ್ವಭಾವಿ ಸಭೆ

ಭಾಸ್ಕರ ಪತ್ರಿಕೆ
0

ಇದೆ 23 ಏಪ್ರಿಲ್ 2025 ನೇ ಬುಧವಾರ   ಬೆಂಗಳೂರು ಜೆ ಸಿ ರಸ್ತೆಯ  ರವೀಂದ್ರ ಕಲಾಕ್ಷೇತ್ರದಲ್ಲಿ ಸಂಘದ 5 ನೇ ವರ್ಷದ ವಾರ್ಷಿಕೋತ್ಸವ ರಾಜ್ಯಮಟ್ಟದ ವಿಶ್ವಕರ್ಮ ಬೃಹತ್ ಸಮಾವೇಶ ಹಾಗೂ ವಿಶ್ವಕರ್ಮ ಪಂಚ ವೃತ್ತಿಗಳಾದ ಕಾಷ್ಟ ಶಿಲ್ಪ (ಮರ) ಲೋಹ ಶಿಲ್ಪ (ಕಬ್ಬಿಣ) ಶಿಲಾ ಶಿಲ್ಪ (ಕಲ್ಲಿನ ಕೆತ್ತನೆ)  ಎರಕ ಶಿಲ್ಪ (ಕಂಚು) ಸ್ವರ್ಣ ಶಿಲ್ಪ (ಚಿನ್ನ- ಬೆಳ್ಳಿ) ಪಂಚ ವೃತ್ತಿಗಳಲ್ಲಿ  ಮಹತ್ವದ ಸಾಧನೆಗೈದು ಎಲೆಮರೆ ಕಾಯಂತಿರುವ ವಿಶ್ವಕರ್ಮ 5 ಪುರುಷ ಸಾಧಕರಿಗೆ ಹಾಗೂ ಕಲೆ  ಶಿಕ್ಷಣ ಸಾಹಿತ್ಯ  ಸಂಗೀತ  ಕಾನೂನು  ಪ್ರತಿಭೆ ಕ್ರೀಡೆ  ರಂಗಭೂಮಿ  ಚಲನಚಿತ್ರ ಇತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿಶ್ವಕರ್ಮ  5 ಮಹಿಳಾ ಸಾಧಕರಿಗೆ. ನಗದು ಸ್ಮರಣಿಕೆ ಮತ್ತು ಪ್ರಶಸ್ತಿ ಪುರಸ್ಕಾರ ನೀಡಿ  ಗೌರವಿಸಲು  ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘ ನಿರ್ಧರಿಸಿದೆ ಮತ್ತು ನಾಡು ನುಡಿಗಾಗಿ ಸೇವೆ ಸಲ್ಲಿಸಿದ ವಿಶ್ವಕರ್ಮ ಹಾಗೂ ಇತರೆ ಸಮಾಜದ ನೂರಾರು ಮಹನೀಯರನ್ನು ಸಹ ಈ ಸಂದರ್ಭದಲ್ಲಿ ಗೌರವಿಸಲಾಗುವುದು ಪ್ರಶಸ್ತಿಗೆ ಭಾಜಾನರಾದ  ಸಾಧಕರ ಹೆಸರನ್ನು ಅಂದಿನ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿ.

ಕರ್ನಾಟಕ ರಾಜ್ಯ ಸರ್ಕಾರದ  ಮಾನ್ಯ ಮುಖ್ಯಮಂತ್ರಿಗಳು ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಾನ್ಯ ಸಚಿವರು ಹಾಗೂ ಸಾರಿಗೆ ಮತ್ತು ಮುಜರಾಯಿ ಮಾನ್ಯ ಸಚಿವರು ಹಾಗೂ ಇತರೆ ಸಚಿವರುಗಳ ಸಮ್ಮುಖದಲ್ಲಿ ಪುರಸ್ಕರಿಸಲಾಗುವುದು ರಾಜ್ಯ ಮಟ್ಟದ ವಿಶ್ವಕರ್ಮ ಸಮಾವೇಶ ಸಂಘದ 5 ನೇ ವರ್ಷದ ವಾರ್ಷಿಕೋತ್ಸವ ಪ್ರಶಸ್ತಿ ಪುರಸ್ಕಾರ ಸಮಾವೇಶದ.ಸರ್ವಾಧ್ಯಕ್ಷರನ್ನಾಗಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ರಾಜ್ಯ ಕಾರ್ಯದರ್ಶಿ  ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜ (ಮಹಿಳಾ ವಿಭಾಗ) ಬೆಂಗಳೂರು  . ರಾಜ್ಯಾಧ್ಯಕ್ಷರು  ಡಾ.ವಸಂತ ಮುರಳಿ ಆಚಾರ್ಯ  ರವರನ್ನು ಸರ್ವಾನುಮತದಿಂದ  ಸಮಾವೇಶದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದ್ದು  ಸಮಾವೇಶದ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ  ಹೊಸದುರ್ಗ ತಾಲ್ಲೂಕು ಬೆಳಗೂರು ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿಯ ಪುಣ್ಯಕ್ಷೇತ್ರ ದರ್ಶನದೊಂದಿಗೆ ಪ್ರಾರಂಭಿಸಲು ತೀರ್ಮಾನಿಸಿದ್ದು ಅಧ್ಯಕ್ಷರಾದ ಡಾ. ವಸಂತ ಮುರಳಿ ಆಚಾರ್ ರವರು ದಿನಾಂಕ 22/03/2025 ನೇ ಶನಿವಾರ ಪ್ರಸಿದ್ಧ ಪುಣ್ಯಕ್ಷೇತ್ರ ಹೊಸದುರ್ಗ ತಾಲೂಕ ಬೆಳಗೂರಿಗೆ  ಆಗಮಿಸಿ  ಶ್ರೀ ವೀರ ಪ್ರತಾಪ ಆಂಜನೇಯ ಸ್ವಾಮಿಯ ಹಾಗೂ ಸ್ವಾಮೀಜಿಯವರ ದರ್ಶನ ಮತ್ತು ಆಶೀರ್ವಾದ  ಪಡೆದುಕೊಳ್ಳುವ ಮುಖಾಂತರ ಅಭಿನಂದನೆಯನ್ನು ಸ್ವೀಕರಿಸಲಿದ್ದಾರೆ ಹಾಗೂ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಬಿ ಜಿ ಗೋವಿಂದಪ್ಪ ಜಿ ರವರನ್ನು ಬೆಲಗೂರಿನ ಶಾಸಕರ ಕಚೇರಿಯಲ್ಲಿ ಭೇಟಿ ಮಾಡಿ ಅಭಿನಂದಿಸಿ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ರಾಜ್ಯ ವಿಶ್ವಕರ್ಮ ಸಮಾವೇಶ ಅಭಿನಂದನಾ ಸಮಾರಂಭಕ್ಕೆ ಸನ್ಮಾನಿತರನ್ನಾಗಿ ಆಹ್ವಾನಿಸಲಾಗುವುದು,

ಆದ್ದರಿಂದ ಸುತ್ತಮುತ್ತಲಿನ ವಿಶ್ವಕರ್ಮ ಬಾಂಧವರು  ಹೆಚ್ಚಿನ ಸಂಖ್ಯೆಯಲ್ಲಿ ಸಮಯ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಬೆಲಗೂರಿನ ಶ್ರೀ ಆಂಜನೇಯ ಸ್ವಾಮಿಯ ದೇವಸ್ಥಾನದ ಸಮ್ಮುಖದಲ್ಲಿ ಭಾಗವಹಿಸುವ ಮುಖಾಂತರ ತಮ್ಮ ಸಲಹೆ ಸಹಕಾರ ಪ್ರೋತ್ಸಾಹ ನೀಡಬೇಕಾಗಿ   ರಾಜ್ಯಾಧ್ಯಕ್ಷರು ಎಂ.ಸೋಮಶೇಖರ್(ಕನ್ನಡ ಸೋಮು) ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘ ಬೆಂಗಳೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಹೊಸದುರ್ಗ ಪರಮೇಶ್ವರಚಾರ್ ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘ ಬೆಂಗಳೂರು, ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರು ಡಾ. ಭಾಸ್ಕರಾಚಾರ್‌ ತಿಪಟೂರು. ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘ ಬೆಂಗಳೂರು, ತುಮಕೂರು ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಶುಭ ವಿಶ್ವಕರ್ಮ ತಿಪಟೂರು, ಮಹಿಳಾ ರಾಜ್ಯಾಧ್ಯಕ್ಷರು ಲಕ್ಷ್ಮೀ ಭಾಸ್ಕರ್ ಬಡಿಗೇರ್‌ ಧಾರವಾಡ ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘ ಬೆಂಗಳೂರು ಮನವಿ ಮಾಡಿಕೊಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*