ಕೇರಾ ಸಂಘದ ಬೆಂಗಳೂರು ಜಿಲ್ಲೆಯ ಎಲ್ಲಾ ಸದಸ್ಯರುಗಳಿಗೆ, ತಾಲ್ಲೂಕು ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ ಗಳಿಗೆ ತಿಳಿಸುವುದೇನೆಂದರೆ: ರಾಜ್ಯ ಸಂಘದ ಸೂಚನೆ ಮೇರೆಗೆ ಈ ವರ್ಷದ ಅಂದರೆ 2025-26ನೇ ಸಾಲಿನ ಸದಸ್ಯತ್ವ ( ಗುರುತಿನ ಚೀಟಿ ) ನವೀಕರಿಸಲು ಹಾಗೂ ಹೊಸ ಸದಸ್ಯರನ್ನು ಸೇರ್ಪಡೆಗೆ ಅವಕಾಶ ಕಲ್ಪಿಸಿದೆ. ಬೆಂಗಳೂರು ಜಿಲ್ಲೆಯ ಎಲ್ಲಾ ಸದಸ್ಯರುಗಳು ಹಾಗೂ ತಾಲೂಕು ಘಟಕಗಳ ಸದಸ್ಯರುಗಳು ಕಳೆದ ವರ್ಷದ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ, 2 ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್ ಜೊತೆಗೆ ಖಾಯಂ ವಾಟ್ಸಾಪ್ ನಂಬರ್ ಕೊಡಬೇಕಿದೆ.
ಹೊಸದಾಗಿ ಸಂಘಕ್ಕೆ ಸದಸ್ಯರಾಗ ಬಯಸುವವರು ಅವರು ಯಾವ ಪತ್ರಿಕೆಯಲ್ಲಿ ವರದಿ ಮಾಡುತ್ತಿದ್ದಾರೋ ಆ ಪತ್ರಿಕೆ ಸಂಪಾದಕರಿಂದ ಪತ್ರ ಅಥವಾ ಪತ್ರಿಕೆಗೆ ನೀಡಿರುವ ಗುರುತಿನ ಚೀಟಿ, ಹಾಗೂ ಆಧಾರ್ ಕಾರ್ಡ್ ಜೊತೆಗೆ ವಾಟ್ಸಾಪ್ ನಂಬರ್ ನೀಡುವುದು. ಈ ವರ್ಷದಿಂದ ರಿಜಿಸ್ಟರ್ಡ್ ಯೂಟ್ಯೂಬ್ (Registerd Youtube Channel ) ಚಾನೆಲ್ ನ ಸದಸ್ಯರುಗಳು ಟಿ.ವಿ ಮಾಧ್ಯಮಗಳ ವರದಿಗಾರರು ಹಾಗೂ ಛಾಯಾಚಿತ್ರಗಾರರು, KERA ಸಂಘಕ್ಕೆ ಸೇರಲು ಅವಕಾಶವಿದ್ದು, ಅವರುಗಳು ಕೂಡ ಸೇರಬಹುದಾಗಿದೆ. ನೋಂದಣಿ ಶುಲ್ಕವನ್ನು ಹಳೆಯ ಸದಸ್ಯರುಗಳಿಗೆ ಮತ್ತು ನೂತನ ಸದಸ್ಯತ್ವ ಬಯಸುವ ಪತ್ರಕರ್ತರಿಗೆ ರೂ.500 ನಿಗದಿ ಮಾಡಲಾಗಿದೆ.
ಈ ತಿಂಗಳು 25 ನೇ ತಾರೀಖಿನಂದು ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕಿನ ಅದ್ಯಕ್ಷರು,ಕಾರ್ಯದರ್ಶಿಗಳು ತಪ್ಪದೆ ಸದಸ್ಯತ್ವ ನವೀಕರಣ ಅರ್ಜಿಗಳು,ನೂತನ ಸದಸ್ಯತ್ವ ಅರ್ಜಿಗಳು ಹಾಗೂ ವಾರ್ಷಿಕ ಸದಸ್ಯತ್ವ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಈ ಮೂಲಕ ಮನವಿ.
ಉಮೇಶ್,
ಜಿಲ್ಲಾಧ್ಯಕ್ಷರು,
ಬೆಂಗಳೂರು ನಗರ, ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘ(ರಿ)
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಡಾ. ಭಾಸ್ಕರ್,
ಜಿಲ್ಲಾಧ್ಯಕ್ಷರು,
ತುಮಕೂರು ನಗರ, ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘ(ರಿ)
ಮೊ: 9448425381
