ಸರಣಿ ಅಪಘಾತ ಕೇಸ್: ‘ನಾನು ಕುಡಿದೇ ಇರಲಿಲ್ಲ’ ಎಂದ ಆರೋಪಿ ಚಾಲಕ

ಭಾಸ್ಕರ ಪತ್ರಿಕೆ
0

ಗುಜರಾತ್ ನ ವಡೋದರಾದಲ್ಲಿ ತನ್ನ ಕಾರನ್ನು ಅನೇಕ ವಾಹನಗಳಿಗೆ ಡಿಕ್ಕಿ ಹೊಡೆದು ಮಹಿಳೆಯೊಬ್ಬಳನ್ನು ಕೊಂದು ಇತರ ನಾಲ್ವರನ್ನು ಗಾಯಗೊಳಿಸಿದ 22 ವರ್ಷದ ವ್ಯಕ್ತಿ, ತಾನು ಕುಡಿದಿರಲಿಲ್ಲ ಎಂದು ಹೇಳಿಕೊಂಡಿದ್ದಾನೆ.

ಆರೋಪಿ ಶನಿವಾರ ಎಎನ್ಐಗೆ ತನ್ನ ಕಾರು ದ್ವಿಚಕ್ರ ವಾಹನಕ್ಕಿಂತ ಮುಂದಿತ್ತು ಮತ್ತು ಬಲಕ್ಕೆ ತಿರುಗುತ್ತಿದ್ದಾಗ ಗುಂಡಿ ಸಿಕ್ತು. ಹೀಗಾಗಿ ತನ್ನ ಕಾರು ನಿಯಂತ್ರಣ ತಪ್ಪಿ ಇತರ ವಾಹನಗಳಿಗೆ ಡಿಕ್ಕಿಯಾಯಿತು ಎಂದು ಹೇಳಿಕೆ ನೀಡಿದ್ದಾನೆ.

ನಾವು ಸ್ಕೂಟಿಯ ಮುಂದೆ ಹೋಗುತ್ತಿದ್ದೆವು. ನಾವು ಬಲಕ್ಕೆ ತಿರುಗುತ್ತಿದ್ದೆವು ಮತ್ತು ರಸ್ತೆಯಲ್ಲಿ ಗುಂಡಿ ಇತ್ತು. ನಾವು ಬಲಕ್ಕೆ ತಿರುಗುವಾಗ ಸ್ಕೂಟಿ ಮತ್ತು ಕಾರು ಇತ್ತು. ಕಾರು ಮತ್ತೊಂದು ವಾಹನವನ್ನು ಸ್ವಲ್ಪ ಸ್ಪರ್ಶಿಸಿತು ಮತ್ತು ಏರ್ ಬ್ಯಾಗ್ ಇದ್ದಕ್ಕಿದ್ದಂತೆ ತೆರೆಯಿತು. ನಮ್ಮ ದೃಷ್ಟಿಗೆ ಅಡ್ಡಿಯಾಯಿತು ಮತ್ತು ಕಾರು ನಿಯಂತ್ರಣ ತಪ್ಪಿತು ಎಂದು ಆರೋಪಿ ರಕ್ಷಿತ್ ರವೀಶ್ ಚೌರಾಸಿಯಾ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*