ತುಮಕೂರು: ಇಂದು ಕರ್ನಾಟಕ ಬಂದ್ ಹಿನ್ನೆಲೆ, ತುಮಕೂರಿನಲ್ಲಿ ಬಂದ್ ಗೆ ಸಂಘಟನೆಗಳು ಕರೆ ನೀಡದ ಹಿನ್ನೆಲೆ ಕಲ್ಪತರು ನಾಡು ತುಮಕೂರಿನಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಎಂದಿನಂತೆ ಸಹಜವಾಗಿರುವ ವಾಹನ ಸಂಚಾರವಿದೆ. ಕೆ.ಎಸ್.ಆರ್.ಟಿ.ಸಿ. ಬಸ್ ಮತ್ತು ಆಟೋ ಗಳ ರಸ್ತೆಗಿಳಿದಿವೆ. ಶಾಲಾ ಕಾಲೇಜುಗಳಿಗೆ ರಜೆ ನೀಡದ ಹಿನ್ನಲೆ, ಎಂದಿನಂತೆ ಜನಸಾಮಾನ್ಯರ ಓಡಾಟ ಕಂಡು ಬಂತು.
ಕನ್ನಡ ಪರ ಸಂಘಟನೆಗಳು ನೈತಿಕ ಬೆಂಬಲ ಮಾತ್ರ ನೀಡಿದ್ದು, ತುಮಕೂರಿನಲ್ಲಿ ಎಂದಿನಂತೆ ಕಾರ್ಯ ಚಟುವಟಿಕೆಗಳು ಆರಂಭವಾಗಿದೆ.

