‘ಸಿಕಂದರ್’ ಆಗಿ ಸಲ್ಮಾನ್ ಖಾನ್: ಹೊಸ ಪೋಸ್ಟರ್ ನಲ್ಲಿ ಹೃದಯ ಕದ್ದ ಸಲ್ಲು ಮತ್ತು ರಶ್ಮಿಕಾ ಮಂದಣ್ಣ

ಭಾಸ್ಕರ ಪತ್ರಿಕೆ
0

ಸಲ್ಮಾನ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ ‘ಸಿಕಂದರ್’ ಟ್ರೈಲರ್ ದಿನಾಂಕವನ್ನು ಬಹಿರಂಗವಾಗಿದೆ. ಖ್ಯಾತ ಚಲನಚಿತ್ರ ನಿರ್ಮಾಪಕ ಎ.ಆರ್.ಮುರುಗದಾಸ್ ನಿರ್ದೇಶನದ ಈ ಚಿತ್ರವು ಆಕ್ಷನ್ ಹೊಂದಿದೆ. ಸಿಕಂದರ್ ಸಿನಿಮಾದ ಟ್ರೈಲರ್ ದಿನಾಂಕ ಘೋಷಣೆಯೊಂದಿಗೆ ಸಿನಿ ಅಭಿಮಾನಿಗಳು ಖುಷ್ ಆಗಿದ್ದಾರೆ.

ಸಿಕಂದರ್ ಟ್ರೈಲರ್ ಈ ಭಾನುವಾರ ಅಂದ್ರೆ ಮಾರ್ಚ್ 23 ರಂದು ಬಿಡುಗಡೆಯಾಗಲಿದೆ ಎಂದು ಸಲ್ಮಾನ್ ಖಾನ್ ಇನ್ಸ್ಟಾಗ್ರಾಮ್ನಲ್ಲಿ ಬಹಿರಂಗಪಡಿಸಿದ್ದಾರೆ. ಇದರೊಂದಿಗೆ ಈ ಚಿತ್ರದ ಹೊಸ ಪೋಸ್ಟರ್ ಅನ್ನು ಸಹ ಅನಾವರಣಗೊಳಿಸಲಾಗಿದೆ.

ಹೊಸ ಪೋಸ್ಟರ್ ನಲ್ಲಿ ಸಲ್ಮಾನ್ ಖಾನ್ ಹಸಿರು ಬಂದ್ಗಾಲದಲ್ಲಿ ಮತ್ತು ರಶ್ಮಿಕಾ ಮಂದಣ್ಣ ಕಪ್ಪು ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ನಲ್ಲಿ ಇವರಿಬ್ಬರು ಆಕರ್ಷಕವಾಗಿ ಫೋಸ್ ಕೊಟ್ಟಿದ್ದಾರೆ. ಈ ಹೊಸ ಪೋಸ್ಟರ್ ನೊಂದಿಗೆ, ಟ್ರೈಲರ್ ಏನನ್ನು ತೆರೆದುಕೊಳ್ಳುತ್ತದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*