ಬೆಂಗಳೂರು: ಜೆ.ಸಿ ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ಎಸ್‌ಎಸ್ ಕಲಾಸಂಗಮ ಹಾಗೂ ಅಮ್ಮನ ಆಶ್ರಯ ಚಾರಿಟಬಲ್ ವತಿಯಿಂದ ದಿ: ಖ್ಯಾತ ಚಿತ್ರನಟ ಪುನೀತ್ ರಾಜ್ ಕುಮಾರ್ ರವರ 50ನೇ ಜನ್ಮದಿನಾಚರಣೆ ಪ್ರಯುಕ್ತ ಸವಿನೆಪಿಗಾಗಿ 'ಯುವರತ್ನ ಅಪ್ಪು' ಪ್ರಶಸ್ತಿಯನ್ನು ಸಮಾಜ ಸೇವಕಿ, ಪತ್ರಕರ್ತೆ, ಕೆ.ರಾ ತಿಪಟೂರು ತಾಲ್ಲೂಕು ಘಟಕದ ಖಜಾಂಚಿ ಶುಭ ವಿಶ್ವಕರ್ಮ ರವರಿಗೆ ನೀಡಿ ಸನ್ಮಾನಿಸಿದ ಸಂದರ್ಭದಲ್ಲಿ, ಸಂಗೀತಕಾರ, ಚಿತ್ರನಟ ಶಶಿಧರ್ ಕೋಟೆ, ಚಿತ್ರನಟ ಸ್ಟೈಲ್ ಶಿವು, ಡಾ|| ವಿಜಯಲಕ್ಷ್ಮಿ, ಸುಧಾ ತ್ಯಾಗರಾಜ್ ಸೇರಿದಂತೆ ಅನೇಕರಿದ್ದರು.
ಇವರಿಗೆ ಕೆ.ರಾ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ.ಭಾಸ್ಕರ್ ಮತ್ತು ಕೆ.ರಾ ತಿಪಟೂರು ತಾಲ್ಲೂಕು ಘಟಕದ ಸರ್ವಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.
