ಶ್ರೀ ಗವಿಸಿದ್ಧೇಶ್ವರ ನರ್ಸಿಂಗ್ ಕಾಲೇಜಿಗೆ ೧೦೦% ಉತ್ತಮ ಫಲಿತಾಂಶ

ಭಾಸ್ಕರ ಪತ್ರಿಕೆ
0
ಕೊಪ್ಪಳ: ನಗರದ ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ದಕ ಟ್ರಸ್ಟನ ಶ್ರೀ ಗವಿಸಿದ್ಧೇಶ್ವರ ನರ್ಸಿಂಗ್ ಕಾಲೇಜಿಗೆ ೧೦೦% ಉತ್ತಮ ಫಲಿತಾಂಶ ಲಿಭಿಸಿದೆ. ರಾಜೀವ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸೆಸ್ ಇವರು ೨೦೨೪-೨೫ನೇ ಸಾಲೀನ ಅಂತಿಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಿದಲಾಗಿದ್ದು, ಕಾಲೇಜಿನ ಭಾವನಾ (ಪ್ರಥಮ ೮೧.೫%), ಪವಿತ್ರಾ (ದ್ವಿತೀಯ ೭೮.೨%), ದೀಪಾ (ತೃತೀಯ ೭೭.೪.%) ಸ್ಥಾನದಲ್ಲಿ ತೇರ್ಗಡೆ ಹೊದಿರುತ್ತಾರೆ. 
ಒಟ್ಟು ೩೭ ವಿದ್ಯಾರ್ಥಿಗಳಲ್ಲಿ ೭ ಡಿಸ್ಟಿಂಕ್ಷನ್, ೩೦ ಪ್ರಥಮ ದರ್ಜೆಯಲ್ಲಿ ಉತ್ತಿರ್ಣರಾಗಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ ಮತ್ತು ಪ್ರಾಚಾರ್ಯರು ಹಾಗೂ ಸಿಬ್ಬಂಧಿ ವರ್ಗ ಹರ್ಷ ವ್ಯಕ್ತಪಡಿಸಿರುತ್ತಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ೯೦೩೬೭೨೫೪೩೫ ಸಂಪರ್ಕಿಸಲು ಕೋರಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*