ತಿಪಟೂರು: ತಾಲೂಕಿನ ಹೊನ್ನವಳ್ಳಿ ಗ್ರಾಮದ ವಾಸಿಯಾದ ರಾಮಮೂರ್ತಿಯವರು(77) ಇಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ. ಅವರ ಅಂತ್ಯಕ್ರಿಯೆಯು ಬೆಂಗಳೂರು ಬಸವೇಶ್ವರ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ. ಇವರಿಗೆ ಇಬ್ಬರು ಪುತ್ರಿಯರು ಒಬ್ಬ ಪುತ್ರ ಇದ್ದಾರೆ. ಇವರು ಹಿರಿಯ ಪತ್ರಕರ್ತರು ಮತ್ತು ಸಂಪಾದಕರು ಹಾಗೂ ವಿಶ್ವಕರ್ಮ ಸಮಾಜದ ಮುಖಂಡರು, ಹಿರಿಯ ಪತ್ರಕರ್ತರಾಗಿ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಂತ ವ್ಯಕ್ತಿ. ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ತಿಪಟೂರಿನಲ್ಲಿ ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ಕನ್ನಡ ಸೋಮು ಅತ್ತಿಬೆಲೆ, ಅಧ್ಯಕ್ಷರು ಮತ್ತು ಹಿರಿಯ ಪತ್ರಕರ್ತರಾದ ಭಾಸ್ಕರ್ ಚಾರ್ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷರು, ಮತ್ತು ಶುಭ ವಿಶ್ವಕರ್ಮ, ಸತೀಶ್ ಮುಳ್ಳೂರು ಪತ್ರಕರ್ತರು, ಬಂಧು ಮಿತ್ರರು ಭಾವಪೂರ್ವಕ ಶ್ರದ್ಧಾಂಜಲಿ ನೆರವೇರಿಸಲಾಯಿತು.
ಜೇನುಗೂಡು ಪತ್ರಿಕೆ ಸಂಪಾದಕರಾದ ರಾಮ್ ಮೂರ್ತಿ(77) ನಿಧನ, ಭಾವಪೂರ್ವಕ ಶ್ರದ್ಧಾಂಜಲಿ ಕಾರ್ಯಕ್ರಮ
ಮೇ 15, 2025
0
Tags

